ಈಗ ಯಾರೇ ಎದುರಿಗೆ ಸಿಗಲಿ ಚೆನ್ನಾಗಿದ್ದೀರಾ? ಎಂದು ಕೇಳುವ ಬದಲಿಗೆ ಎಂಥ
ಬಿಸಿಲಲ್ಲಾ? ಎಂದು ಹೇಳುತ್ತಿದ್ದಾರೆ. ಈ ಉರಿ ಬಿಸಿಲಿನಲ್ಲಿ ಮನೆಯಿಂದ ಹೊರಗಡೆ ಹೆಜ್ಜೆ
ಹಾಕಲು ಹಿಂದೆ ಮುಂದೆ ಯೋಚಿಸುತ್ತಿದ್ದಾರೆ. ರಣ ಬಿಸಿಲಿನಿಂದಾಗಿ ಜನಕ್ಕೆ ಸಾಕಾಗಿ
ಹೋಗಿದೆ, ಮನೆಯಲ್ಲಿದ್ದರೂ ಸೆಕೆಯಿಂದಾಗಿ ಸಾಕೋ ಸಾಕಾಗಿ ಹೋಗುತ್ತಿದೆ. ಅದರಲ್ಲೂ
ಗೃಹಣಿಯರಿಗೆ ಮನೆಯಲ್ಲಿ ಅಡುಗೆ ಮಾಡಿ ಮುಗಿಸುವಷ್ಟರಲ್ಲಿ ಸೆಕೆಯಿಂದಾಗಿ ಸಾಕೋ ಸಾನಿಸಿ
ಬಿಡುತ್ತದೆ. ಈ ಬೇಸಿಗೆಯಲ್ಲಿ ಮನೆಯೊಳಗಡೆ ಸೆಕೆ ಕಡಿಮೆಯಾಗಲು ಈ ಟ್ರಿಕ್ಸ್ ಬಳಸಿ:
1. ಕಿಟಕಿಗೆ ಬ್ಲೈಂಡ್ಸ್ ಹಾಕಿಸಿ
ಕಿಟಕಿಗಳಿಗೆ ಬ್ಲೈಂಡ್ಸ್ ಹಾಕಿ ಅಲ್ಲದೆ ದಪ್ಪವಾದ ಕಟರ್ನ್ ಬಳಸಿ, ಈ ಕರ್ಟನ್‌ಗಳ
ಸೂರ್ಯನ ಬೆಳಕನ್ನು ಹಿಡಿದಿಡುವುದರಿಂದ ಮನೆಯೊಳಗಡೆ ಅಷ್ಟು ಬಿಸಿಲು ಬೀಳಲ್ಲ.
2. ಮನೆಯ ಒಳಗಡೆ ಹಾಗೂ ಹೊರಡಗೆ ಗಿಡಗಳಿರಲಿ
ಮನೆಯ ಹೊರಗಡೆ ಸುತ್ತಲೂ ಗಿಡಗಳಿದ್ದರೆ ಅದರಿಂದ ಸ್ವಲ್ಪ ಗಾಳಿ ಬರುತ್ತದೆ. ಮನೆಯ ಒಳಗಡೆ
ಕೂಡ ಕೆಲವೊಂದು ಗಿಡಗಳನ್ನು ತಂದಿಡಿ, ಇದು ಗಾಳಿಯನ್ನು ಶುದ್ಧ ಮಾಡುತ್ತದೆ.
3. ನಿಮ್ಮ ಮನೆಯ ಫ್ಯಾನ್ ಅಡ್ಜೆಸ್ಟ್ ಮಾಡಿ ಕೆಲವೊಮ್ಮೆ ನಿಮ್ಮ ಮನೆಯ ಫ್ಯಾನ್ ತಣ್ಣನೆಯ ಗಾಳಿ ಬೀಸುವ ಬದಲಿಗೆ ಅದರಿಂದ ಬಿಸಿ ಗಾಳಿ ಬರುತ್ತಿದೆ ಎಂದು ನಿಮಗನಿಸುತ್ತಿರಬಹುದು ಅಲ್ವಾ? ನಿಮ್ಮ ಫ್ಯಾನ್ ಅಪ್ರದಕ್ಷಿಣೆಯಾಗಿ ತಿರುಗದಿದ್ದರೆ ಈ ರೀತಿ ಬಿಸಿ ಗಾಳಿ ಬರುವುದು. ಆದ್ದರಿಂದ ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಪ್ರದಕ್ಷಿಣೆಯಾಗಿ ಸುತ್ತುವಂತೆ ಅಡ್ಜೆಸ್ಟ್ ಮಾಡಿ.
3. ನಿಮ್ಮ ಮನೆಯ ಫ್ಯಾನ್ ಅಡ್ಜೆಸ್ಟ್ ಮಾಡಿ ಕೆಲವೊಮ್ಮೆ ನಿಮ್ಮ ಮನೆಯ ಫ್ಯಾನ್ ತಣ್ಣನೆಯ ಗಾಳಿ ಬೀಸುವ ಬದಲಿಗೆ ಅದರಿಂದ ಬಿಸಿ ಗಾಳಿ ಬರುತ್ತಿದೆ ಎಂದು ನಿಮಗನಿಸುತ್ತಿರಬಹುದು ಅಲ್ವಾ? ನಿಮ್ಮ ಫ್ಯಾನ್ ಅಪ್ರದಕ್ಷಿಣೆಯಾಗಿ ತಿರುಗದಿದ್ದರೆ ಈ ರೀತಿ ಬಿಸಿ ಗಾಳಿ ಬರುವುದು. ಆದ್ದರಿಂದ ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಪ್ರದಕ್ಷಿಣೆಯಾಗಿ ಸುತ್ತುವಂತೆ ಅಡ್ಜೆಸ್ಟ್ ಮಾಡಿ.
4. ಏರ್ ಕಂಡೀಷನರ್ ಬಳಸುವಾಗ ಕಿಟಕಿ, ಬಾಗಿಲು ಮುಚ್ಚಿರಿ:
ಇದರಿಂದ ನಿಮ್ಮ ಕೋಣೆ ಅಥವಾ ಮನೆ ತಂಪಾಗಿರುತ್ತದೆ. ಕೆಲವರು ಏರ್ ಕಂಡೀಷನರ್ ಹಾಕಿ
ರೂಂನ ಬಾಗಿಲು ತೆರೆದಿಡುವುದು ಮಾಡುತ್ತಾರೆ. ಹೀಗೆ ಮಾಡಿದರೆ ಕೋಣೆ ತಂಪಾಗುವುದಿಲ್ಲ.
5. ಫ್ಯಾನ್‌ನಿಂದ ಕೂಲರ್ ಎಫಕ್ಟ್ ಬೇಕೆ?
ನೀವು ಫ್ಯಾನ್ ಕೆಳಗಡೆ ಅಥವಾ ಎದುರುಗಡೆ ಐಸ್ ಅನ್ನು ಒಂದು ತಡೆಯಲ್ಲಿ ಹಾಕಿಡಿ, ಇದರಿಂದ
ಗಾಳಿ ಬೀಸುವಾಗ ತುಂಬಾ ತಣ್ಣಗಾಗುವುದು. ನೀವು ಕೂಲರ್ ಎದುರು ಕೂಡ ಹೀಗೆ ಇಟ್ಟರೆ
ತುಂಬಾನೇ ತಂಪಾಗಿರುತ್ತದೆ.
6. ಕೂಲರ್‌ಗೆ ಕೂಡ ಐಸ್ ಹಾಕಿದ ನೀರು ಬಳಸಿದರೆ ತುಂಬಾ ತಂಪಾಗಿ ಇರುತ್ತದೆ,
7. ಕುತ್ತಿಗೆಗೆ ಒದ್ದೆ ಬಟ್ಟೆ ಹಾಕಿ
ಒಂದು ಕಾಟನ್ ಬಟ್ಟೆ ಅಥವಾ ಟವಲ್ ಒದ್ದೆ ಮಾಡಿ ಕುತ್ತಿಗೆಗೆ ಹಾಕಿಡಿ, ಇದರಿಂದ ತಂಪು
ಅನಿಸುವುದು. ತುಂಬಾ ಸೆಕೆ ಇದ್ದಾಗ ತಣ್ಣೀರಿನಲ್ಲಿ ಸ್ನಾನ ಮಾಡಿ.
8. ಬೇಸಿಗೆಯಲ್ಲಿ ಬಲ್ಬ್ ಬದಲಾಯಿಸಿ:
ಬೇಸಿಗೆಯಲ್ಲಿ ಹೆಚ್ಚು ಶಾಖ ನೀಡುವ ಬಲ್ಬ್ ಬಳಸಬೇಡಿ. ಸಾಧ್ಯವಾದಷ್ಟು ಬಲ್ಬ್ ಕಡಿಮೆ
ಬಳಸಿ. ಅಡುಗೆ ಕೂಡ ಅಷ್ಟೇ ಮನೆಯೊಂದ ಹೊರಗಡೆ ಮಾಡುವ ವ್ಯವಸ್ಥೆಯಿದ್ದರೆ ಹೊರಗಡೆ ಮಾಡಿ.
ಇದರಿಂದ ಮನೆಯೊಳಗಡೆ ಸೆಕೆಯಾಗುವುದು ಕಡಿಮೆಯಾಗುವುದು.
9. ಅಂಗೈಗೆ ನೀರು ಬಿಡಿ
ಅಂಗೈಯನ್ನು ಒಂದು ನಿಮಿಷ ಟ್ಯಾಪ್‌ನಲ್ಲಿ ಹಿಡಿಯಿರಿ. ಹೊರಗಡೆ ಹೋದಾಗ ಟ್ಯಾಪ್ ನೀರು
ಹಾಕಲು ಸಾಧ್ಯವಾಗದಿದ್ದರೆ ಕೈಯ ಮಣಿಗಂಟಿಗೆ ನೀರು ಹಾಕಿ, ಇದು ನಿಮ್ಮ ದೇಹವನ್ನು ತಂಪಾಗಿ
ಇಡುತ್ತದೆ.
10. ತಲೆ ತೊಳೆಯಿರಿ
ತಲೆಗೆ ತಣ್ಣೀರು ಹಾಕಿದರೆ ಕೂಲ್ ಆಗಿರುತ್ತದೆ. ಇದರಿಂದ ಸೆಕೆ ಕಡಿಮೆಯಾಗುವುದು.
11. ರಾತ್ರಿ ಹೊತ್ತಿನಲ್ಲಿ ಕಿಟಕಿ ತೆರೆದಿಡಿ
ಇದರಿಂದ ರಾತ್ರಿ ಹೊತ್ತಿನಲ್ಲಿ ತಂಪಾದ ಗಾಳಿ ಮನೆಯೊಗಳಗಡೆ ಬರುತ್ತದೆ. ಕಳ್ಳರ
ಆತಂಕವಿದ್ದರೆ ಮನೆ ಕಿಟಕಿ ತೆರೆದಿಡಬೇಡಿ.