ಕೋಝಿಕೋಡ್: ಎಲತ್ತೂರ್ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಪ್ರಾಥಮಿಕ ತನಿಖಾ ವರದಿಯನ್ನು ಕೋಝಿಕ್ಕೋಡ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಬುಧವಾರ ಸಲ್ಲಿಸಲಾಯಿತು.
ಆರೋಪಿ ಶಾರುಖ್ ಸೈಫಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಪರಿಗಣಿಸಿದಾಗ ಈ ವರದಿ ಸಲ್ಲಿಸಲಾಗಿದೆ.
ಪ್ರಕರಣದಲ್ಲಿ ಭಯೋತ್ಪಾದಕ ಚಟುವಟಿಕೆ ಮತ್ತು ಪಿತೂರಿ ಒಳಗೊಂಡಿರುವ ಕಾರಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ತಿದ್ದುಪಡಿ ಕಾಯ್ದೆಯ (ಯುಎಪಿಎ) ಸೆಕ್ಷನ್ 16 ಅನ್ನು ಆರೋಪಿ ಮೇಲೆ ಹಾಕಲಾಗಿದೆ ಎಂದು ವರದಿ ಹೇಳಿದೆ. ಪ್ರಾಸಿಕ್ಯೂಷನ್ ಜಾಮೀನು ಅರ್ಜಿಯನ್ನು ವಿರೋಧಿಸಿ ಪ್ರಕರಣವನ್ನು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲು ಶಿಫಾರಸು ಮಾಡಿದೆ.
ಆರೋಪಿ ವಿರುದ್ಧ ಕೇರಳ ಪೊಲೀಸರು ಯುಎಪಿಎ ಆರೋಪ ಮಾಡಿದ ನಂತರ, ಎನ್‍ಐಎ ಪ್ರಕರಣವನ್ನು ವಹಿಸಿಕೊಂಡಿದ್ದು, ಪ್ರಕರಣದ ವರ್ಗಾವಣೆಯ ಪ್ರಕ್ರಿಯೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಸೈಫಿಯ ಅಂತರರಾಜ್ಯ ಸಂಪರ್ಕಗಳು, ಪ್ರಕರಣದಲ್ಲಿನ ಪಿತೂರಿ ಮತ್ತು ಭಯೋತ್ಪಾದಕರ ಪ್ರಭಾವದ ಬಗ್ಗೆ ಎನ್‍ಐಎ ತನಿಖೆ ನಡೆಸಲಿದೆ. ಸೈಫಿ ವಿರುದ್ಧ ಯುಎಪಿಎ ಹಾಕಿದ್ದರಿಂದ ನ್ಯಾಯಾಲಯವು ಸೈಫಿಯ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಎಲತ್ತೂರು ರೈಲು ದಾಳಿ ಪ್ರಕರಣದ ಆರೋಪಿಗೆ ಜಾಮೀನು ನಿರಾಕರಣೆ
0
ಏಪ್ರಿಲ್ 20, 2023
Tags