HEALTH TIPS

ವರ್ಷಾವಧಿ ಉತ್ಸವ ಹಾಗೂ ರಂಗಪೂಜೆ

                ಮಂಜೇಶ್ವರ: ತಲೇಕಳ ಶ್ರೀ ಸದಾಶಿವ ರಾಮವಿಠಲ ದೇವಸ್ಥಾನದಲ್ಲಿ ಅಕ್ಷಯ ತೃತೀಯ ಪರ್ವ ಕಾಲದ ಸುದಿನದಂದು ವμರ್Áವಧಿ ಉತ್ಸವ ಹಾಗೂ ರಂಗಪೂಜಾ ಉತ್ಸವವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.  ಶ್ರೀ ದೇವರ ಸನ್ನಿಧಿಯಲ್ಲಿ ಉಷಃಕಾಲ ಪೂಜೆಯೊಂದಿಗೆ ವರ್ಕಾಡಿ ಗಣೇಶ ತಂತ್ರಿಗಳ ಉಪಸ್ಥಿತಿಯಲ್ಲಿ ಬ್ರಹ್ಮಶ್ರೀ ವೇದಮೂರ್ತಿ ವೆಂಕಟೇಶ ಭಟ್ ತಲಪಾಡಿ ನವಕ ಕಲಶಾಭಿಷೇಕ ಮತ್ತು ಇತರ ಹಲವು ಕಾರ್ಯಕ್ರಮಗಳನ್ನು ಅನುವಂಶಿಕ ಮೊಕ್ತೇಸರ ವೇದಮೂರ್ತಿ ಎಸ್ ವಾಸುದೇವ ಭಟ್ ಸಂಕೇಸ ಇವರ ನೇತೃತ್ವದಲ್ಲಿ  ಶ್ರೀಕಾಂತ ಮಾಣಿಲಾತ್ತಯರು, ಲಕ್ಷ್ಮಿಶ ವಿ, ರಾಮಕೃಷ್ಣ  ಪ್ರಸಾದ್ ಎಸ್, ಶಿವರಾಜ್ ವಿ ಇವರುಗಳ ಸಹಯೋಗದೊಂದಿಗೆ ಶ್ರೀ ಮಹಾಗಣಪತಿ ಹೋಮ, ಪವಮಾನ ಅಭಿಷೇಕ, ನಾಗಾರಾಧನೆ, ಗುರುವಂದನೆ ವನ ಶಾಸ್ತರ ಸಹಿತ ಪರಿವಾರ ದೇವರ ಸನ್ನಿಧಿಗಳಲ್ಲಿ ವಿಶೇಷ ಪೂಜೆ, ಪ್ರಾತಃಕಾಲ, ಮಧ್ಯಾಹ್ನ ಹಾಗೂ ರಾತ್ರಿ ನಡೆಯಿತು. ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.


            ಸಾಂಸ್ಕøತಿಕ ಕಾರ್ಯಕ್ರಮಗಳನ್ನು ನೃತ್ಯ, ಭಜನಾ ಕಾರ್ಯಕ್ರಮಗಳು, ತೃತೀಯ ಪುಣ್ಯದ ಪ್ರಾರ್ಥನೆಯನ್ನು ಸನ್ನಿಧಿಯಲ್ಲಿ ನಡೆಯಿತು. ಪ್ರಧಾನ ದೇವರಾದ ಶ್ರೀ ಸದಾಶಿವ ದೇವರ ಸನ್ನಿಧಿಯಲ್ಲಿ ಉತ್ಸವ ಪ್ರಯುಕ್ತ  ಕ್ಷೀರಾಭಿಷೇಕ, ದಧಿ, ಘೃತ, ಜೇನು, ಶರ್ಕರ ಅಭಿಷೇಕ, ಪಂಚಾಮೃತ ಅಭಿಷೇಕ, ರುದ್ರಾಭಿμÉೀಕ ನಡೆಯಿತು. ಸ್ಥಳಶುದ್ಧಿ, ಪಂಚಗವ್ಯ ಪುಣ್ಯಾಹ ನವಕ ಪ್ರಧಾನ ಅಭಿಷೇಕ, ಅರ್ಚನಾ ಸೂಕ್ತ ಮಂತ್ರ ಪಠಣ ನಡೆಯಿತು. ತುಲಾಭಾರ ಸೇವೆ ನೆರವೇರಿತು. ರಜತ ಸ್ವರ್ಣಾ ಪುμÁ್ಪಲಂಕಾರಗಳೊಂದಿಗೆ  ಮಹಾಪೂಜೆ ನಡೆಸಲಾಯಿತು.s   ಸಾಂಸ್ಕೃತಿಕ ಅಂಗವಾಗಿ ಬೆಂಗಳೂರಿನ ನಾಟ್ಯ ಸರಸ್ವತಿ ಶ್ರೀಮತಿ ಶಾರದಾ ಆಚಾರ್ಯರ ನಿರ್ದೇಶನದೊಂದಿಗೆ ಕಲಾವಿದರಾದ ಕುಮಾರಿಯವರಾದ ಪ್ರತ್ಯುμÁ ಭಟ್, ತ್ವಿμÁ ಭಟ್ ಸಂಕೇಸ ಸದನ ಇವರಿಂದ  ಭರತನಾಟ್ಯ ನಾಟ್ಯ ಸುಧೆ ನಡೆಯಿತು. ವಿಠಲ ಭಜನಾ ಮಂಡಳಿ ಚಿಗುರುಪಾದೆ ಇವರಿಂದ, ರಾತ್ರಿ ಶ್ರೀ ಸದಾಶಿವ ರಾಮ ವಿಠಲ ಭಜನಾ ಮಂಡಳಿ ಇವರಿಂದ ಭಜನಾ ಸೇವೆ ಮಾಡಲಾಯಿತು. ಶ್ರೀ ಕಾವಿ ಯಕ್ಷ ಬಳಗ ವರ್ಕಾಡಿ ಇದರ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಪ್ರಸಂಗ ‘ಷಣ್ಮುಖ ವಿಜಯ’ ಸೊಬಗನ್ನು ಸಲ್ಲಸಿ ಶ್ರೀ ಕ್ಷೇತ್ರದ ಸಲುವಾಗಿ  ರಾಮಕೃಷ್ಣ ಪ್ರಸಾದ್ ಅವರು ತಾಳಮದ್ದಳೆಯವರಿಗೆ ಶಾಲನ್ನು ಓದಿಸಿ ಗೌರವಿಸಿದರು. ಸುಬ್ಬಣ್ಣ ಭಂಡಾರಿ ತಲೇಕಳ ವಂದಿಸಿದರು.ಸೋಮವಾರ ಉಷಃಪೂಜೆ, ಮಹಾಸಂಪ್ರೋಕ್ಷಣೆ ನಡೆಯಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries