ಮಂಜೇಶ್ವರ: ಉದ್ಯಾವರ ಅರಸು ಮಂಜಿμÁ್ಣರು ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಲುವಾಗಿ ಪ್ರಾಚೀನ ಕಾಲದಿಂದಲೇ ನಡೆದುಕೊಂಡು ಬರುತ್ತಿರುವ ಅರಸು ದೈವಗಳ ಜಮಾಅತ್ ಭೇಟಿ ಇಂದಿಗೂ ಹಿಂದೂ ಮುಸ್ಲಿಂ ಭಾವೈಕ್ಯಕ್ಕೊಂದು ಪ್ರತೀಕವಾಗಿದೆ. ಮೇಷ ಸಂಕ್ರಮಣ ಕಳೆದು ಬರುವ ಮೊದಲ ಶುಕ್ರವಾರ ಈ ಅನುಷ್ಠಾನ ವಾಡಿಕೆಯಾಗಿದೆ. ಶುಕ್ರವಾರ ಮಧ್ಯಾಹ್ನ ಉದ್ಯಾವರ ಕ್ಷೇತ್ರದ ಭಂಡಾರ ಮನೆಯಿಂದ ಹೊರಟ ದೈವಗಳು ಮಸೀದಿಗೆ ಸಾಂಪ್ರದಾಯಿಕ ಭೇಟಿ ನೀಡಿ ಉತ್ಸವಕ್ಕೆ ಆಹ್ವಾನ ನೀಡಿತು.
ಹಿಂದೂ-ಮುಸ್ಲಿಂ ಐಕ್ಯದ ಜಾತ್ರೆ ಎಂದೇ ಕರೆಯಲ್ಪಡುವ ಜೊತೆಗೆ ಭಾವೈಕ್ಯತೆಯ ಸಂಕೇತದೊಂದಿಗೆ ಕಳೆದ ಹಲವಾರು ವರ್ಷಗಳಿಂದ ರೂಢಿಯಲ್ಲಿರುವ ಇತಿಹಾಸ ಪ್ರಸಿದ್ಧ ಉದ್ಯಾವರ ಶ್ರೀ ಮಾಡ ದೈವ ಕ್ಷೇತ್ರದ ಜಾತ್ರೆಯ ಪೂರ್ವಭಾವಿಯಾಗಿ ಉದ್ಯಾವರ ಸಾವಿರ ಜಮಾಅತ್ ಮಸೀದಿಗೆ ದೈವ ಪಾತ್ರಿಗಳು ಭೇಟಿ ನೀಡಿ, ಬಳಿಕ ಜಮಾಅತ್ ನ ಮುಸ್ಲಿಂ ಬಾಂಧವರನ್ನು ಜಾತ್ರೋತ್ಸವಕ್ಕೆ ಆಹ್ವಾನಿಸಿದೆ.
ಉದ್ಯಾವರ ಶ್ರೀ ಮಾಡ ದೈವ ಕ್ಷೇತ್ರದ ದೈವ ಪಾತ್ರಿಗಳು ಉದ್ಯಾವರ ಸಾವಿರ ಜಮಾಅತ್ ಮಸೀದಿಗೆ ಭೇಟಿ ನೀಡಿದ ವೇಳೆ ಮಸೀದಿಯ ಆಡಳಿತ ಸಮಿತಿಯ ಪ್ರತಿನಿಧಿಗಳು, ಶಾಸಕರು, ಹಾಗೂ ಮುಸ್ಲಿಂ ಬಾಂಧವರು ದೈವ ಪಾತ್ರಿಗಳಿಗೆ ಪೂರ್ವ ಪರಂಪರೆಯಂತೆ ವೈಭವದ ಸ್ವಾಗತ ನೀಡಿದರು.
ವಿಶೇಷವೆಂದರೆ ಉದ್ಯಾವರ ಮಾಡದ ಶ್ರೀ ಅರಸು ದೈವದ ಜಾತ್ರೆಯಲ್ಲಿ ಮುಸ್ಲಿಂ ಬಾಂಧವರೂ ಕೂಡ ಪಾಲ್ಗೊಳ್ಳುತ್ತಾರೆ. ಈ ಕ್ಷೇತ್ರದಲ್ಲಿ ಹಿಂದಿನಿಂದ ನಡೆದುಕೊಂಡು ಬಂದ ಪರಂಪರೆಯಂತೆ ನೇಮೋತ್ಸವ ನಡೆಯುವ ದಿನದಂದು ಮಸೀದಿಯ ಅಧಿಕೃತರು ಕುಳ್ಳಿರಲು ದೈವಸ್ಥಾನದಲ್ಲಿ ವಿಶೇಷವಾಗಿ ನೀಡಲಡುವ ಸ್ಥಳವಿದೆ. ಜಾತ್ರೆಯ ದಿನ ದೈವಗಳು ಆಶೀರ್ವದಿಸಿ ನೀಡಿದ ಹೂವನ್ನು ಜಮಾಅತ್ ಅಧಿಕೃತರಿಗೆ ನೀಡಲಾಗುತ್ತದೆ.
ಮೇ 9 ರಂದು ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರಕಲಿದೆ. ಮೇ 11 ಹಾಗೂ 12 ರಂದು ಜಾತ್ರೋತ್ಸವ ನಡೆಯಲಿದೆ. ಹರೀಶ್ ಶೆಟ್ಟಿ ಮಾಡ, ರಘು ಶೆಟ್ಟಿ, ಕಿರಣ್ ಶೆಟ್ಟಿ, ಸಂಜೀವ ಶೆಟ್ಟಿ, ತಿಮ್ಮ ಭಂಡಾರಿ, ದುಗ್ಗ ಭಂಡಾರಿ, ಪದ್ಮ ಗುರಿಕ್ಕಾರ್, ದಯಾಕರ ಮಾಡ, ಹಾಗೂ ಕ್ಷೇತ್ರದ ಪದಾಧಿಕಾರಿಗಳು ಸಮುದಾಯದ ನೇತಾರರು ಮಸೀದಿ ಭೇಟಿಗೆ ನೇತೃತ್ವ ನೀಡಿದರು.