ಕಾಸರಗೋಡು: ನಗರದ ಕಾವುಗೋಳಿಯಲ್ಲಿ ಸ್ಥಿತಿಗೊಂಡಿರುವ ಶಿವಕ್ಷೇತ್ರದಲ್ಲಿ ಪುನ: ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಸಮಾರಂಭಕ್ಕೆ ಅದ್ಧೂರಿಯ ಚಾಲನೆ ನೀಡಲಾಯಿತು. ಬೆಳಗ್ಗೆ ಕೆ.ಕೆ.ಪುರಂ ಯುವಜನ ಸಮಿತಿ ವತಿಯಿಂದ ನೂತನವಾಗಿ ನಿರ್ಮಿಸಿದ ಮಹಾದ್ವಾರವನ್ನು ಶ್ರೀ ಕ್ಷೇತ್ರ ತಂತ್ರಿವರ್ಯ ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ದೇವಸ್ಥಾನಕ್ಕೆ ಸಮರ್ಪಿಸಿದರು. ನಂತರ ಹರಿಜಾಲ್ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಶಿವಕ್ಷೇರದ ವರೆಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹಾಗೂ ಉಗ್ರಾಣ ಮುಹೂರ್ತ ನಡೆಯಿತು. ಏಪ್ರಿಲ್ 22 ರಂದು ಆರಂಭವಾದ ಕಾರ್ಯಕ್ರಮವು ಮೇ 1 ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.