ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ನಾಯಿ. ಅನ್ನ ಹಾಕಿದ ಮಾಲೀಕನ ಮನೆಯ ಋಣವನ್ನು ಶ್ವಾನ ಎಂದಿಗೂ ಮರೆಯೋದಿಲ್ಲ. ಅನೇಕರಿಗೆ ಶ್ವಾನ ಎಂದರೆ ಎಲ್ಲಿಲ್ಲದ ಪ್ರೀತಿ. ಮನೆಯ ಮಗನಂತೆ ಶ್ವಾನವನ್ನು ಸಾಕುತ್ತಾರೆ. ಮನೆಯಲ್ಲಿ ನಾಯಿಯಿದ್ದರೆ ಅದು ನಮ್ಮ ಮನೆಯ ಸದಸ್ಯೆನೇ ಆಗಿ ಬಿಡುತ್ತದೆ. ನಿಮಗೊತ್ತಾ ಮನೆಯಲ್ಲಿ ನಾಯಿಯಿದ್ದರೆ ನಮ್ಮ ಆರೋಗ್ಯದ ದೃಷ್ಟಿಯಿಂದ ತುಂಬಾನೇ ಒಳ್ಳೆಯದಂತೆ. ಅಷ್ಟಕ್ಕು ಪ್ರತಿ ನಿತ್ಯ ನಾಯಿಯನ್ನು ತಪ್ಪಿಕೊಳ್ಳುವುದರಿಂದ ಏನೆಲ್ಲಾ ಲಾಭಗಳಿದೆ ಗೊತ್ತಾ?
1. ರಕ್ತದೊತ್ತಡ ಕಡಿಮೆ ಮಾಡುತ್ತದೆ
ಒಂದು ಅಧ್ಯಯನದ ಪ್ರಕಾರ ನಾಯಿಯ ಮಾಲೀಕರಲ್ಲಿ ರಕ್ತದೊತ್ತಡದ ಸಮಸ್ಯೆ ಕಡಿಮೆ
ಕಾಣಿಸಿಕೊಂಡಿದ್ಯಂತೆ. ನಂಬಲು ಅಸಾಧ್ಯವಾದ್ರು ಕೂಡ ಇದು ನಿಜ. ಹೌದು, ಪ್ರತಿನಿತ್ಯ
ನಾಯಿಯನ್ನು ತಬ್ಬಿಕೊಂಡರೆ ನಮ್ಮ ರಕ್ತದೊತ್ತಡದ ಪ್ರಮಾಣ ಕಡಿಮೆಯಾಗುತ್ತಂತೆ. ನಿಮಗೆ
ಅನುಮಾನವಿದ್ದರೆ ವೈದ್ಯರ ಬಳಿ ಹೋಗಿ ಪರೀಕ್ಷಿಸಿಕೊಳ್ಳಿ. ಆಗ ನಿಮಗೆ ಅಸಲಿಯತ್ತು ಏನು
ಅನ್ನೋದು ಗೊತ್ತಾಗುತ್ತದೆ.
2. ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ
ಹೌದು, ನಾಯಿಯ ಮಾಲೀಕರಲ್ಲದವರಿಗೆ ಹೋಲಿಕೆ ಮಾಡಿದ್ರೆ ನಾಯಿಯ ಮಾಲೀಕರ ದೇಹದಲ್ಲಿ ಕಡಿಮೆ
ಕೊಲೆಸ್ಟ್ರಾಲ್ ಅಂಶ ಕಾಣಿಸಿಕೊಂಡಿದ್ಯಂತೆ. ಈ ರೀತಿ ಹೇಳಿದ್ರೆ ಜನ ಖಂಡಿತ ನಂಬೋದಿಲ್ಲ.
ಒಂದು ವೇಳೆ ನಿಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಅಧಿಕವಿದ್ದರೆ ಪ್ರತಿನಿತ್ಯ
ನಾಯಿಯನ್ನು ತಬ್ಬಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಕೆಲ ದಿನಗಳ ನಂತರ ಪರೀಕ್ಷಿಸಿ ನೋಡಿ.
3. ಹೃದಯಾಘಾತದ ಅಪಾಯ ಕಡಿಮೆಯಾಗುತ್ತದೆ
ಮನೆಯಲ್ಲಿ ನಾಯಿಯಿದ್ದರೆ ನಮಗೆ ಒಂಟಿತನ ಕಾಡೋದಿಲ್ಲ. ಅದು ಕೂಡ ಮಕ್ಕಳ ಹಾಗೆನೇ ನಾಯಿಯ
ಜೊತೆಗೆ ಬೆರೆತ ತಕ್ಷಣ ನಮಗೆ ಯಾವುದೇ ರೀತಿಯ ನೋವಿದ್ದರೂ ಕೂಡ ಅದನ್ನು ಮರೆಯುತ್ತೇವೆ.
ಒಂದು ಅಧ್ಯಯನದ ಪ್ರಕಾರ ಬೇರೆಯವರಿಗೆ ಹೋಲಿಕೆ ಮಾಡಿದ್ರೆ ಶ್ವಾನದ ಮಾಲೀಕರು
ಹೃದಯಾಘಾತವಾಗಿದ್ದರೂ ಕೂಡ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಂತೆ.
4. ನಾಯಿಗಳು ಜನರ ನೋವನ್ನು ಗುಣ ಪಡಿಸುತ್ತವೆ
ಮನುಷ್ಯರಿಗೆ ಅನೇಕ ರೀತಿಯ ನೋವುಗಳಿರುತ್ತದೆ. ಅದು ದೈಹಿಕ ನೋವಾಗಿರಬಹುದು ಅಥವಾ ಮಾನಸಿಕ
ನೋವಾಗಿರಬಹುದು. ದೈಹಿಕ ನೋವನ್ನು ಗುಣ ಪಡಿಸೋದು ಸುಲಭ. ಆದರೆ ಮಾನಸಿಕ ನೋವನ್ನು ಗುಣ
ಪಡಿಸೋದು ಅಂದುಕೊಂಡಷ್ಟು ಸುಲಭವಲ್ಲ. ''ಅನಿಮಲ್ ಅಸಿಸ್ಟೆಡ್ ಥೆರಪಿ'' ಯಲ್ಲಿ
ನಾಯಿಯನ್ನು ಬಳಕೆ ಮಾಡಲಾಗುತ್ತದೆ. ರೋಗಿಯ ಆರೋಗ್ಯ ಸಮಸ್ಯೆಯನ್ನು ಸುಧಾರಿಸಲು ಇದನ್ನು
ಬಳಕೆ ಮಾಡಲಾಗುತ್ತದೆ. ಹೀಗಾಗಿ ನಿಮ್ಮ ಮನೆಯಲ್ಲಿ ನಾಯಿಯಿದ್ದರೆ ಪ್ರತಿನಿತ್ಯ ಅದನ್ನು
ಅಪ್ಪಿಕೊಳ್ಳಿ ನಿಮ್ಮ ಎಲ್ಲಾ ಸಮ್ಯೆಗೂ ಪರಿಹಾರ ಸಿಗುತ್ತದೆ.
5. ಖಿನ್ನತೆಯಂತಹ ಸಮಸ್ಯೆಗಳು ಪರಿಹಾರವಾಗುತ್ತೆ
ಖಿನ್ನತೆ ಮನುಷ್ಯನನ್ನು ಕಾಡುವ ಮಾನಸಿಕ ಸಮಸ್ಯೆಗಳಲ್ಲಿ ಒಂದು. ಒರ್ವ ವ್ಯಕ್ತಿ ಒಂದು
ಸಾರಿ ಖಿನ್ನತೆಗೆ ಒಳಗಾಗಿ ಬಿಟ್ರೆ ಇದರಿಂದ ಹೊರ ಬರೋದು ತುಂಬಾನೇ ಕಷ್ಟ. ಅಂತದ್ರಲ್ಲಿ
ನೀವು ನಿತ್ಯವು ನಿಮ್ಮ ಪ್ರೀತಿಯ ಶ್ವಾನವನ್ನು ಅಪ್ಪಿಕೊಳ್ಳುವ ಮುಖಾಂತರ ಈ ಸಮಸ್ಯೆಗೆ
ಪರಿಹಾರ ಕಂಡುಕೊಳ್ಳಬಹುದು ಎಂದು ಅಧ್ಯಯನಗಳಿಂದ ಸಾಭೀತಾಗಿದೆ. ನಾಯಿಯೊಂದಿಗೆ ಒಡನಾಡ
ಮಾಡೋದ್ರಿಂದ ನಮ್ಮ ನೋವು ಕಡಿಮೆಯಾಗುತ್ತಂತೆ.
6. ಆತಂಕ ದೂರವಾಗುತ್ತದೆ
ನಾಯಿಗೆ ನಾವು ಎಷ್ಟು ಪ್ರೀತಿಯನ್ನು ನೀಡುತ್ತೇವೆಯೋ ಬದಲಾಗಿ ಅದು ನಮಗೆ ಹೆಚ್ಚಿನ
ಪ್ರೀತಿಯನ್ನು ನೀಡುತ್ತದೆ. ಮನುಷ್ಯರಿಗೆ ಹೇಗೆ ನಾವು ಒಬ್ಬರಿಂದ ದೂರವಾಗುತ್ತೇವೆ ಅನ್ನೋ
ಆತಂಕ ಇರುತ್ತದೆಯೋ ಅದೇ ರೀತಿ ಪ್ರಾಣಿಗಳಿಗೂ ಕೂಡ ತಮ್ಮ ಪ್ರೀತಿ ಪಾತ್ರರು
ದೂರವಾಗುತ್ತಾರೋ ಎಂಬ ಭಯ ಇದ್ದೇ ಇರುತ್ತದೆ. ಹೀಗಾಗಿ ನೀವು ಪ್ರತಿನಿತ್ಯ ನಾಯಿಯನ್ನು
ತಬ್ಬಿಕೊಂಡರೆ ನಿಮ್ಮ ಶ್ವಾನಕ್ಕಿರುವ ಆತಂಕ ದೂರವಾಗುತ್ತದೆ. ನಿಮ್ಮ ಹಾಗೂ ನಾಯಿಯ
ನಡುವಿನ ಸಂಬಂಧ ಉತ್ತಮವಾಗುತ್ತದೆ.
ಮನುಷ್ಯರಾದರೂ ಉಂಡ ಮನೆಗೆ ಎರಡು
ಬಗೆಯುವ ಕೆಲಸ ಮಾಡುತ್ತಾರೆ. ಆದರೆ ನಾಯಿಗಳು ಎಂದಿಗೂ ಆ ಕೆಲಸ ಮಾಡೋದಿಲ್ಲ. ಸಂಕಷ್ಟದ
ಪರಿಸ್ಥಿತಿಯಲ್ಲಿ ಪ್ರಾಣ ಕೊಟ್ಟಾದರೂ ಸರಿ ತನ್ನ ಮಾಲೀಕನ ಜೀವವನ್ನು ಉಳಿಸುತ್ತದೆ.