ಕಾಸರಗೋಡು: ಕುಂಬಳೆ ಸನಿಹದ ಮೊಗ್ರಲ್‍ಪುತ್ತೂರಿನಲ್ಲಿ ಬೀದಿದೀಪ ದುರಸ್ತಿಗೆ ವಿದ್ಯುತ್ ಕಂಬವೇರಿದ್ದ ಕಾರ್ಮಿಕ ವಿದ್ಯುತ್ ಶಾಕ್ ತಗುಲಿ ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಶಿರಿಯ ನಿವಾಸಿ ಮಹಮ್ಮದ್ ಹನೀಫ್(40)ಮೃತಪಟ್ಟವರು.
ನೆಲ್ಲಿಕುಂಜೆ ವಿದ್ಯುತ್ ಸೆಕ್ಷನ್ ವ್ಯಾಪ್ತಿಯಲ್ಲಿ ಬರುವ ಮೊಗ್ರಾಲ್‍ಪುತ್ತೂರಿನಲ್ಲಿ ಭಾನುವಾರ ವಿದ್ಯುತ್ ಕಂಬದಲ್ಲಿ ದುರಸ್ತಿಕಾರ್ಯ ನಡೆಸುವ ಮಧ್ಯೆ ಶಾಕ್ ತಗುಲಿದ್ದು, ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಘಿರಲಿಲ್ಲ. ಇಲೆಕ್ಟ್ರಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿರುವ ಮಹಮ್ಮದ್ ಹನೀಫ್ ಕೆಎಸ್‍ಇಬಿಗಾಗಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿಕೊಂಡು ಬರುತ್ತಿದ್ದರು. ಭಾನುವಾರ ವಿದ್ಯುತ್ ದುರಸ್ತಿ ಬಗ್ಗೆ ಇಲಾಖೆಗೆ ಮಾಹಿತಿಯಿರಲಿಲ್ಲ. ಇಲಾಖೆ ಗಮನಕ್ಕೆ ಬಾರದೆ, ಗುತ್ತಿಗೆದಾರರ ಮೂಲಕ ಕೆಲಸ ನಡೆಸಿರುವ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೆಎಸ್‍ಇಬಿ ಪ್ರಭಾರ ಸಹಾಯಕ ಮಹಾಅಭಿಯಂತ ಮಾಯಾ ತಿಳಿಸಿದ್ದಾರೆ.
ವಿದ್ಯುತ್ ಶಾಕ್ ತಗುಲಿ ಕೆಎಸ್‍ಇಬಿ ಗುತ್ತಿಗೆ ಕಾರ್ಮಿಕ ಮೃತ್ಯು
0
ಏಪ್ರಿಲ್ 16, 2023