HEALTH TIPS

ಭಾರತದಲ್ಲಿ ಆಯಪಲ್‌ನ ಮೊದಲ ಅಧಿಕೃತ ಮಳಿಗೆ ಮುಂಬೈನಲ್ಲಿ ನಾಳೆ ಆರಂಭ: ಏನು ವಿಶೇಷ?

 

           ಮುಂಬೈ: ಭಾರತದ ಮೊದಲ ಆಯಪಲ್‌ ಸ್ಟೋರ್‌ 'ಆಯಪಲ್ ಬಿಕೆಸಿ' ಮುಂಬೈನಲ್ಲಿ ಮಂಗಳವಾರ (ಏ.18) ಆರಂಭವಾಗಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನ ಜಿಯೊ ವರ್ಲ್ಡ್‌ ಡ್ರೈವ್‌ ಮಾಲ್‌ನಲ್ಲಿ ಈ ಸ್ಟೋರ್‌ ಪ್ರಾರಂಭವಾಗಲಿದೆ.

                 ಆಯಪಲ್‌ ಕಂಪನಿ ಸಿಇಒ ಟಿಮ್ ಕುಕ್ ಈ ಮಳಿಗೆಯನ್ನು ಉದ್ಘಾಟನೆ ಮಾಡಲಿದ್ದಾರೆ.

'ಆಯಪಲ್‌ ಬಿಕೆಸಿ' ಎಂದು ಈ ಸ್ಟೋರ್‌ಗೆ ಹೆಸರಿಡಲಾಗಿದೆ. ಸ್ಟೋರ್‌ನ ವಿನ್ಯಾಸವು ಮುಂಬೈನ ಪ್ರಸಿದ್ಧ 'ಕಪ್ಪು-ಹಳದಿ ಟಾಕ್ಸಿ'ಯಿಂದ ಪ್ರೇರಣೆಗೊಂಡಿದೆ. ಅಲ್ಲದೇ ಪೂರ್ಣ ಸ್ಟೋರ್‌ ಅನ್ನು ಶೇ 100 ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣ ಮಾಡಲಾಗಿದೆ.

                ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್‌ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ 'ಹಲೋ ಮುಂಬೈ' ಎಂದು ಬರೆಯಲಾಗಿದೆ. ಮುಂಬೈ ರೈಸಿಂಗ್ ಕಾರ್ಯಕ್ರಮದ ಮೂಲಕ ಸ್ಟೋರ್ ತೆರೆದುಕೊಳ್ಳಲಿದೆ.

              ವಿಶೇಷವೆಂದರೆ ಈ ಮಳಿಗೆಯಲ್ಲಿ 20 ಭಾಷೆ ಮಾತನಾಡುವ 100 ಜನ ಸೇವಾ ಪ್ರತಿನಿಧಿಗಳಿರಲಿದ್ದಾರೆ.

               ಈ ಮಳಿಗೆಯಲ್ಲಿ ಭಾರತದಲ್ಲಿ ಆಯಪಲ್‌ನ ಗಮನಾರ್ಹ ವ್ಯಾಪಾರ ವಿಸ್ತರಣೆಯನ್ನು ಸೂಚಿಸುತ್ತಿದ್ದು, ಗ್ರಾಹಕರಿಗೆ ಹೊಸತನ, ಅಸಾಧಾರಣ ಸೇವೆ, ಅನುಭವ ಪಡೆಯಲು ಮತ್ತು ಉತ್ಪನ್ನಗಳ ಖರೀದಿಗೆ ಅವಕಾಶ ಮಾಡಿಕೊಡಲಿದೆ.

                  ಆಯಪಲ್ ಕಂಪನಿ ಭಾರತದಲ್ಲಿ ತನ್ನ ಅಧಿಕೃತ ಎರಡು ಸ್ಟೋರ್‌ಗಳನ್ನು ಪ್ರಾರಂಭಿಸುತ್ತಿದ್ದು ಏಪ್ರಿಲ್ 20 ರಂದು ದೆಹಲಿಯಲ್ಲಿ ಆಯಪಲ್ ಸಾಕೇತ್ ಮಳಿಗೆ ಅನಾವರಣಗೊಳ್ಳಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries