ಕೊಲ್ಲಂ: ಯುವಕರನ್ನು ಪರಿಚಯ ಮಾಡಿಕೊಂಡು ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರುವ ಆರೋಪದ ಮೇಲೆ ಮಹಿಳೆ ಮತ್ತು ಆಕೆಯ ಫ್ರೆಂಡ್ನನ್ನು ಕೇರಳ ಪೊಲಿಸರು ಬಂಧಿಸಿದ್ದಾರೆ.
ಬಂಧಿತರನ್ನು ಪ್ರಥಮ ಆರೋಪಿ ಕೊಲ್ಲಂನ ಚದಯಮಂಗಳಂ ಮೂಲದ ಬಿಂದು (41) ಹಾಗೂ ಮೂರನೇ ಆರೋಪಿ ತ್ರಿಸ್ಸೂರ್ನ ಇರಿಂಜಲಕುಡ ಮೂಲದ ರಣೀಶ್ (35) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಎರಡನೇ ಆರೋಪಿಯಾಗಿರುವ ಬಿಂದು ಮಗ ಮಿಥುನ್ ಮೋಹನ್ ನಾಪತ್ತೆಯಾಗಿದ್ದು ಆತನಿಗಾಗಿ ಬಲೆ ಬೀಸಿದ್ದಾರೆ.
ತೆಕ್ಕೆಕ್ಕರ ವತ್ತಿಕುಲಂ ಮೂಲದ ಯುವಕನ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಕರುನಾಗಪಲ್ಲಿ ಮೂಲದ ಯುವಕನ ದೂರಿನ ಮೇರೆಗೆ ಕೊಲ್ಲಂ ಸೈಬರ್ ಪೊಲೀಸರೂ ಸಹ ಬಿಂದುವನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದರು. ಇವರಿಬ್ಬರು ಕೊಟ್ಟಾಯಂ ಮೂಲದ ಯುವಕರಿಂದ ಸುಮಾರು 10 ಲಕ್ಷ ರೂ. ಸುಲಿಗೆ ಮಾಡಿರುವ ಆರೋಪದ ಮೇಲೆ ಬಂಧಿಸಲಾಗಿದೆ.
ಸಾಮಾಜಿ ಜಾಲತಾಣದಲ್ಲಿ ಭೇಟಿಯಾದ ಯುವಕರನ್ನು ವಂಚಿಸುವುದೇ ಇವರಿಬ್ಬರು ಕೆಲಸವಾಗಿತ್ತು. ಬಿಂದು ವತಿಕುಲಂ ನಿವಾಸಿಯೊಬ್ಬರಿಗೆ ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿನಿಯಂತೆ ಸೋಗು ಹಾಕಿಕೊಂಡು ಸ್ನೇಹ ಬೆಳೆಸಿ, ಕೋರ್ಸ್ ಮುಗಿದ ನಂತರ ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ನಂತರ ಓದಲು 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು. ಖಾತೆಯಲ್ಲಿ ಹಣ ಪಡೆದ ನಂತರ ಆಕೆ ಆತನಿಗೆ ಕರೆ ಮಾಡುವುದನ್ನು ನಿಲ್ಲಿಸಿದಳು. ನಂತರ ಬಿಂದುವಿನ ಫೋನ್ ಸ್ವಿಚ್ ಆಫ್ ಆಗಿರುವಾಗ ಅವರ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಆಕೆಯ ಬಂಧನವಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.