ಕಾಸರಗೋಡು: ಬೆದ್ರಡ್ಕ ಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೆ ಆರಂಭಗೊಂಡಿತು. ಕೋಟೆಕುಂಜ ಬಳಿಯ ಮಾಳ್ಯ ಮೂಲ ಸ್ಥಾನದಿಂದ ಶ್ರೀ ದೈವಗಳ ಕೀರ್ವಾಳು ಸಹಿತ ಭಂಡಾರ ಶ್ರೀ ದೈವಸ್ಥಾನಕ್ಕೆ ವಾದ್ಯ ಘೋಷಗಳ ಮೆರವಣಿಗೆಯಲ್ಲಿ ಬರಮಾಡಿ ಕ್ಕೊಳಲಾಯಿತು. ಶ್ರೀ ದೈವಸ್ಥಾನದ ತಂತ್ರಿವರ್ಯ ಬ್ರಹ್ಮಶ್ರೀ ಉಳಿಯುತ್ತಾಯ ವಿಷ್ಣು ಅಸ್ರ ಅವರು ಧ್ವಜಾರೋಹಣ ನಡೆಸಿದರು.
ಶನಿವಾರ ಶ್ರೀ ಕಿನ್ನಿಮಾಣಿ ದೈವದ ನೇಮ ನಡೆಯಿತು. 2ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಪೂಮಾಣಿ ದೈವ ನೇಮೋತ್ಸವ ರಾತ್ರಿ 8ರಿಂದ 8.30ರೊಳಗೆ ಪೇರಾಲ್ ಕಣ್ಣೂರಿನಿಂದ ಶ್ರೀ ಬೀರ್ಣಾಳ್ವ ದೈವ ಹಾಗೂ ಪುತ್ತೂರು ಕೊಟ್ಯರಿಂದ ಶ್ರೀ ಧೂಮಾವತೀ ದೈವ ಭಂಡಾರ ಆಗಮಿಸುವುದು.
ಏ. 3ರಂದು ಮಧ್ಯಾಹ್ನ 1ಗಂಟೆಗೆ ಶ್ರೀ ಬೀರ್ಣಾಳ್ವ ದೈವ ನೇಮೋತ್ಸವ, ಸಂಜೆ 3.30ಕ್ಕೆ ಶ್ರೀ ಧೂಮಾವತೀ ದೈವ ನೇಮೋತ್ಸವ ನಡೆಯುವುದು. ಏ.1ರಂದು ರಾತ್ರಿ 10.30ಕ್ಕೆ ಪಾಪೆ ಬಂಡಿ ಉತ್ಸವ, ಏ 2 ರಂದು ರಾತ್ರಿ 11.30ಕ್ಕೆ ಪಾಪೆ ಬಂಡಿ ಉತ್ಸವ ವಿಶೇಷ ಸುಡುಮದ್ದು ಪ್ರದರ್ಶನ ನಡೆಯುವುದು.
ಬೆದ್ರಡ್ಕ ಶ್ರೀ ಪೂಮಾಣಿ -ಕಿನ್ನಿಮಾಣಿ ದೈವಸ್ಥಾನದ ವಾರ್ಷಿಕ ಜಾತ್ರೆಗೆ ಚಾಲನೆ
0
ಏಪ್ರಿಲ್ 01, 2023