1. ರೋಗ ಬಂದಾಗ ನಿರ್ಲಕ್ಷಿಸಬೇಡಿ
ಪ್ರಾಣಿಗಳು ಕೂಡ ಮನುಷ್ಯರ ಹಾಗೆನೇ. ಬೇಸಿಗೆಯಲ್ಲಿ ಪ್ರಾಣಿಗಳು ಕೂಡ ಡಿಹೈಡ್ರೇಟ್
ಆಗುತ್ತದೆ. ಹಾಗೂ ಅವುಗಳಲ್ಲಿ ಜ್ವರ, ವಾಂತಿಯಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ.
ಇಂತಹ ಸಂದರ್ಭದಲ್ಲಿ ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಕರೆಸಿ ಚಿಕಿತ್ಸೆ
ಕೊಡಿಸಿ. ಇಲ್ಲದಿದ್ದರೆ ಸಾವು ಸಂಭವಿಸುವ ಅಪಾಯ ಹೆಚ್ಚಾಗಿರುತ್ತದೆ. ಆದಷ್ಟು
ಜಾಗರೂಕತೆಯಿಂದ ನೋಡಿಕೊಳ್ಳಿ.
2. ತ್ವಚೆಯ ಆರೈಕೆ ಮಾಡಿ
ಬೇಸಿಗೆಯಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆ ಬಟ್ಟೆ ಅಥವಾ ಮಾಸ್ಕ್ ಧರಿಸೋದು ಒಳ್ಳೆಯದಲ್ಲ.
ಈ ಬೇಸಿಗೆಯಲ್ಲಿ ಅವುಗಳನ್ನು ಹೊರಗಡೆ ಕರೆದುಕೊಂಡು ಹೋದಾಗ ಯಾವುದೇ ರೀತಿ ಬಟ್ಟೆ
ಧರಿಸಬೇಡಿ. ಅವುಗಳಿಗೆ ಮುಕ್ತವಾಗಿ ಉಸಿರಾಡಲು ಅವಕಾಶ ನೀಡಿ. ಉಣ್ಣೆ ಅಥವಾ ಬೇರೆ
ಕ್ರಿಮಿಗಳು ಇದ್ಯಾ ಎಂದು ಅವುಗಳ ಕೊರಳ ಒಟ್ಟಿಯನ್ನು ಪರಿಶೀಲಿಸಿ. ಅಲೋವೆಲಾ ಹಾಗೂ ಟೀ
ಟ್ರೀ ಅಂಶವಿರೋ ಶಾಂಪೂ ಬಳಸಿ. ಇನ್ನೂ ಮನೆಯಲ್ಲಿ ನಾಯಿಯ ಗಾಯ ಗುಣಪಡಿಸುವ ಸ್ಪ್ರೇ
ಇಟ್ಟುಕೊಳ್ಳಿ.
3. ಸರಿಯಾದ ಆಹಾರ ನೀಡಿ
ಶ್ವಾನ ಅಥವಾ ನೀವು ಸಾಕುವ ಪ್ರಾಣಿಗಳಿಗೆ ಬೇಸಿಗೆ ಕಾಲದಲ್ಲಿ ಅವುಗಳ ದೇಹಕ್ಕೆ ಸರಿ
ಹೊಂದುವ ಆಹಾರವನ್ನೇ ನೀಡಿ. ಕಲ್ಲಂಗಡಿಯಂತಹ ನೀರಿನಿಂದ ಸಮೃದ್ಧವಾದ ಆಹಾರಗಳು ಅವುಗಳನ್ನು
ಹೈಡ್ರೇಟ್ ಆಗಿರಿಸುತ್ತದೆ. ಆದಷ್ಟು ಹಣ್ಣು ಹಾಗೂ ತರಕಾರಿಗಳನ್ನು ನೀಡಿ ಇದು ನಿಮ್ಮ
ಶ್ವಾನವನ್ನು ಹೈಡ್ರೇಟ್ ಆಗಿಡಲು ಸಹಕರಿಸುತ್ತದೆ. ಹೆಚ್ಚಾಗಿ ಮೊಸರು ಹಾಗೂ ಅನ್ನ,
ಕಿತ್ತಾಳೆ, ಬಾಳೆಹಣ್ಣು, ಸೌತೆಕಾಯಿ, ಮಜ್ಜಿಗೆ ಹೀಗೆ ಬೇಸಿಗೆ ಆಹಾರಗಳನ್ನೇ ಹೆಚ್ಚಾಗಿ
ನೀಡಿ. ಇನ್ನೂ ಐಸ್‌ಕ್ರೀಮ್, ಚಾಕಲೇಟ್‌ಗಳನ್ನು ನೀಡಲೇಬೇಡಿ. ಇದಿಷ್ಟೇ ಅಲ್ಲ ಸಕ್ಕರೆ
ಹಾಗೂ ಉಪ್ಪಿನ ಅಂಶವಿರುವ ಪದಾರ್ಥಗಳನ್ನು ಹೆಚ್ಚಾಗಿ ನೀಡಬೇಡಿ.
5. ಸಾಕುಪ್ರಾಣಿಯ ಅಂದ ಹೆಚ್ಚಿಸಿ
ನೀವು ಯಾವ ರೀತಿ ಸ್ನಾನ ಮಾಡಿದ ನಂತರ ತಾಜಾತನವನ್ನು ಅನುಭವಸುತ್ತೀರೋ ಅದೇ ರೀತಿ ನಿಮ್ಮ
ನಾಯಿಗೂ ಯಾವಾಗಲಾದರೂ ಒಮ್ಮೆ ಸ್ನಾನ ಮಾಡಿಸಿ. ಅದರ ಹಲ್ಲುಜ್ಜಿ, ಉಗುರುಗಳನ್ನು
ಕತ್ತರಿಸಿ. ಇನ್ನೂ ಸಾಧ್ಯವಾದರೆ ಈ ಬೇಸಿಗೆಯಲ್ಲಿ ಅದರ ಕ್ಷೌರ ಕೂಡ ಮಾಡಿಸಿ. ಇದರಿಂದ
ಅವುಗಳಿಗೂ ಏನೋ ಹೊಸತು ಅನುಭವವಾಗುತ್ತದೆ. ಹಾಗೂ ಅವುಗಳು ಆರಾಮದಾಯಕವಾಗಿರುತ್ತವೆ.
6. ಸಾಕು ಪ್ರಾಣಿಯನ್ನು ಕಾರ್‌ನೊಳಗಡೆ ಬಿಡಬೇಡಿ
ಈ ಬೇಸಿಗೆ ಕಾಲದಲ್ಲಿ ನಿಮ್ಮ ಸಾಕು ಪ್ರಾಣಿಯನ್ನು ಕಾರ್‌ನ ಒಳಗಡೆ ಬಿಡಬೇಡಿ. ಏಕೆಂದರೆ
ಅದಕ್ಕೆ ಉಸಿರುಗಟ್ಟಿದಂತಾಗುತ್ತದೆ. ಸಾಮಾನ್ಯ ವೇಳೆ ಕಾರ್‌ನ ಒಳಭಾಗದ ಉಷ್ಣಾಂಶ 40
ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಅದೇ ಬೇಸಿಗೆ ಕಾಲದಲ್ಲಿ ಸೂರ್ಯ ಕಿರಣಗಳು
ನೇರವಾಗಿ ಒಳಬರೋದ್ರಿಂದ ಕಾರಿನ ಒಳಗಿನ ಉಷ್ಣಾಂಶ 120 ಡಿಗ್ರಿಯನ್ನು ತಲುಪುತ್ತದೆ.
ಇನ್ನೂ ನೀವು ನಿಮ್ಮ ಸಾಕು ಪ್ರಾಣಿಯ ಜೊತೆಗೆ ಕಾರಿನಲ್ಲಿ ಪ್ರಯಾಣಿಸೋದಾದರೆ ನೀರಿನ
ಬಾಟಲ್ ಹಾಗೂ ಒಂದು ಬೌಲ್ ಇಟ್ಟುಕೊಳ್ಳಿ.
ಸಾಕು ಪ್ರಾಣಿಗಳು ಕೂಡ
ಮನುಷ್ಯರಂತೆಯೇ. ಬೇಸಿಗೆಯಲ್ಲಿ ನಮಗೆ ಯಾವ ರೀತಿ ಅನುಭವ ಆಗುತ್ತದೆಯೋ ಪ್ರಾಣಿಗಳು ಕೂಡ
ಅದಕ್ಕಿಂತ ಹೆಚ್ಚು ನೋವನ್ನು ಅನುಭವಿಸುತ್ತದೆ. ಹೀಗಾಗಿ ಈ ಬೇಸಿಗೆಯಲ್ಲಿ ಅವುಗಳ ಪೋಷಣೆ
ಮಾಡುವುದು ತುಂಬಾನೇ ಮುಖ್ಯವಾಗುತ್ತದೆ.