ಕಾಸರಗೋಡು: ಮಕ್ಕಳ ಸಾಮಥ್ರ್ಯ ಹಾಗೂ ಅವರ ಅಭಿರುಚಿ ನಿರ್ಧರಿಸಿ ಅವರನ್ನು ಬೆಳೆಸುವಲ್ಲಿ ಶಿಕ್ಷಕರು ಮತ್ತು ಹೆತ್ತವರು ಗಮನಹರಿಸಬೇಕು ಎಂದು ಕೇರಳ ವಿಧಾನಸಭಾಧ್ಯಕ್ಷ ಎ.ಎನ್.ಶಂಸೀರ್ ತಿಳಿಸಿದ್ದಾರೆ. ಅವರು ಮೇಲಂಗೋಟ್‍ನಲ್ಲಿರುವ ಎ.ಸಿ.ಕಣ್ಣನ್ ನಾಯರ್ ಸ್ಮಾರಕ ಸರ್ಕಾರಿ ಯುಪಿ ಶಾಲೆಯ ಶತಮಾನೋತ್ಸವ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ನಾರ್ವೆ, ಫಿನ್‍ಲ್ಯಾಂಡ್ ದೇಶಗಳು ಶಾಲಾ ಶಿಕ್ಷಣದ ವಿಷಯದಲ್ಲಿ ಪ್ರಪಂಚದಲ್ಲಿ ಮುಂಚೂಣಿಯಲ್ಲಿರುವುದನ್ನು ಅಧ್ಯಯನ ಸೂಚಿಸುತ್ತಿದೆ. ಭಾವನಾತ್ಮಕ ಬುದ್ಧಿವಂತಿಕೆಯೂ ಯಶಸ್ವಿಯಾದರೆ ಮಾತ್ರ ವ್ಯಕ್ತಿಯು ಪರಿಪೂರ್ಣತೆಯನ್ನು ತಲುಪಬಹುದು ಎಂದು ತಿಳಿಸಿದರು.
ಶಾಸಕ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾ ಕುಮಾರಿ, ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ಲತಾ, ನಗರಸಭಾ ಸದಸ್ಯರಾದ ಸುಜಿತ್ ಕುಮಾರ್, ಎನ್.ಅಶೋಕ್ ಕುಮಾರ್, ಡಯಟ್ ಪ್ರಾಂಶುಪಾಲ ಡಾ. ಕೆ.ರಘುರಾಮಭಟ್, ಪ್ರಭಾರ ಎಇಒ ಜಯಶ್ರೀ, ಕಾರ್ಯಾಧ್ಯಕ್ಷೆ ಪಿ.ಅಪ್ಪುಕುಟ್ಟನ್, ಹಣಕಾಸು ಸಮಿತಿ ಅಧ್ಯಕ್ಷ ಎಂ.ರಾಘವನ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಬಿ.ಬಾಬು, ಪಿಟಿಎ ಅಧ್ಯಕ್ಷ ಜಿ.ಜಯನ್, ಮುಖ್ಯಶಿಕ್ಷಕಿ ಪಿ.ಶ್ರೀಕಲಾ ಉಪಸ್ಥಿತರಿದ್ದರು. ನಗರಸಭಾಧ್ಯಕ್ಷೆ ಕೆ.ವಿ.ಸುಜಾತಾ ಸ್ವಾಗತಿಸಿದರು. ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪಪ್ಪನ್ ಕುಟ್ಟಮತ್ ವಂದಿಸಿದರು.