ನವದೆಹಲಿ (PTI): ಮತ್ತೆ ಒಂದಾಗಲು ಇನ್ನೊಂದು ಅವಕಾಶ ಏಕೆ ಪಡೆಯಬಾರದು ಎಂದು ವಿಚ್ಛೇದನ ಬಯಸಿದ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿಗೆ ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ.
ನವದೆಹಲಿ (PTI): ಮತ್ತೆ ಒಂದಾಗಲು ಇನ್ನೊಂದು ಅವಕಾಶ ಏಕೆ ಪಡೆಯಬಾರದು ಎಂದು ವಿಚ್ಛೇದನ ಬಯಸಿದ ಸಾಫ್ಟ್‌ವೇರ್ ಎಂಜಿನಿಯರ್ ದಂಪತಿಗೆ ಸುಪ್ರೀಂ ಕೋರ್ಟ್ ಕಿವಿಮಾತು ಹೇಳಿದೆ.
ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠವು, 'ಇಬ್ಬರೂ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್‌ವೇರ್ ಎಂಜಿಯರ್‌ಗಳು.
'ಬೆಂಗಳೂರಿನಲ್ಲಿ ಹೆಚ್ಚೇನೂ ವಿಚ್ಛೇದನಗಳು ನಡೆಯುವುದಿಲ್ಲ. ದಂಪತಿಗಳು ಮತ್ತೊಂದು ಅವಕಾಶ ಕೊಟ್ಟುಕೊಳ್ಳಬಹುದು' ಎಂದು ನ್ಯಾ.ನಾಗರತ್ನ ಹೇಳಿದರು.
ಆದರೆ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ವೈವಾಹಿಕ ಸಂಬಂಧವನ್ನು ಕಡಿದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.