ಕಾಸರಗೋಡು: ಮಧೂರು ಶ್ರೀ ಸಿದ್ದಿವಿನಾಯಕ ಮದನಂತೇಶ್ವರ ದೇವಸ್ಥಾನದ ಮೂಲಸ್ಥಾನ ಉಳಿಯತಡ್ಕದಲ್ಲಿ ನವೀಕರಿಸಿ ನಿರ್ಮಿಸಲಾದ ಶ್ರೀದೇವರ ಶಿಲಾಮಯ ಕಟ್ಟೆಯನ್ನು ಕ್ಷೇತ್ರ ತಂತ್ರಿವರ್ಯ ದೇರೆಬೈಲು ಡಾ. ಶಿವ ಪ್ರಸಾದ್ ತಂತ್ರಿಗಳು ತಾಂತ್ರಿಕ ವಿಧಿವಿಧಾನದೊಂದಿಗೆ ಲೋಕಾರ್ಪಣೆಗೈದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೃಷ್ಣರಜೆ ವರ್ಮರಾಜ, ಬಿ.ಎನ್ ಸುಬ್ರಹ್ಮಣ್ಯ, ಕೆ.ಶ್ರೀಕೃಷ್ಣ, ಕ್ಷೇತ್ರ ನವೀಕರಣ ಸಮಿತಿಯ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ನಾರಾಯಣಯ್ಯ, ಮುರಳಿ ಗಟ್ಟಿ, ಉಪಸ್ಥಿತರಿದ್ದರು.
ಈ ಸಂದರ್ಭ ಡಾ. ಶಿವ ಪ್ರಸಾದ್ ತಂತ್ರಿ ಅವರ ನೇತೃತ್ವದಲ್ಲಿ ಶ್ರೀಮಹಾಗಣಪತಿ ಹೋಮ, ಶುದ್ದಿಕಲಶ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿಏ. 17ರಂದು ಮಧೂರಿನಿಂದ ಶ್ರೀದೇವರು ಮೂಲಸ್ಥಾನ ಉಳಿಯತ್ತಡ್ಕಕ್ಕೆ ಸವಾರಿ ಮೂಲಕ ಆಗಮಿಸಿ, ನೂತನ ಕಟ್ಟೆಯಲ್ಲಿ ವಿಶೇಷ ಕಟ್ಟೆ ಪೂಜೆ ನೆರವೇರಲಿರುವುದು.
ನವೀಕರಿಸಿ ನಿರ್ಮಿಸಲಾದ ಶ್ರೀದೇವರ ಶಿಲಾಮಯ ಕಟ್ಟೆಯ ಲೋಕಾರ್ಪಣೆ
0
ಏಪ್ರಿಲ್ 15, 2023