ಕಾಸರಗೋಡು: 'ಮೈ ಕೇರಳ ಎಕ್ಸಿಬಿಷನ್ ಮತ್ತು ಮಾರ್ಕೆಟಿಂಗ್ ಮೇಳ-2023' ರ ಅಂಗವಾಗಿ, ಮಾಹಿತಿ ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಮಾಹಿತಿ ಕಛೇರಿ ವತಿಯಿಂದ ಕೇಕ್ ತಯಾರಿಸುವ ಸ್ಪರ್ಧೆಯನ್ನು "ಮೇಕ್ ಕೇಕ್ ವಿನ್ ಪ್ರೈಜ್" ಅನ್ನು ಆಯೋಜಿಸಲಾಯಿತು. ವಿದ್ಯಾನಗರ ಆಸಾಪ್‍ಸಮುದಾಯ ಭವನದಲ್ಲಿ ನಡೆದ ಸ್ಪರ್ಧೆಯನ್ನು ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಶೀಬಾ ಮುಮ್ತಾಜ್ ಉದ್ಘಾಟಿಸಿದರು.
ವಿವಿಧ ರುಚಿಗಳೊಂದಿಗೆ ತಯಾರಿಸಿದ ಕೇಕಿನೊಂದಿಗೆ ಅನೇಕ ಜನರು ಸ್ಪರ್ಧೆಯಲ್ಲಿ ಭಾಗವಹಿಸಿದರು. ಕೇಕ್ ತಯಾರಿ ಸಪರ್ಧೆಯಲ್ಲಿ ಸಜಿತಾ ಮುನೀರ್ ಪ್ರಥಮ ಹಾಗೂ ಕೆ.ರಜಿನಿ ದ್ವಿತೀಯ ಸ್ಥಾನ ಪಡೆದುಕೊಂಡರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್, ಎಸ್‍ಜಿಎಸ್‍ಟಿ ಜಂಟಿ ಆಯುಕ್ತ ಪಿ.ಸಿ.ಜಯರಾಜ್ ಉಪಸ್ಥಿತರಿದ್ದರು. ಖ್ಯಾತ ಪೇಸ್ಟ್ರಿ ಬಾಣಸಿಗ ಎ. ಪ್ರಶಾಂತ್ ಖತಾರ್ ತೀರ್ಪುಗಾರರಾಗಿದ್ದರು. ಸುದ್ದಿ ಸಂಪಾದಕಿ ಕೆ.ದೀಕ್ಷಿತಾ ವಂದಿಸಿದರು.