ಕಾಸರಗೋಡು: ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಖಚಿತಪಡಿಸಬೇಕು, ರಾಷ್ಟ್ರೀಯ ಕಾರ್ಮಿಕ ಕಾನೂನು ರಚಿಸಬೇಕು, ಗುತ್ತಿಗೆ ನೇಮಕಾತಿ ಕೊನೆಗೊಳಿಸಬೇಕು, ಜೀವನಕ್ಕೆ ಅಗತ್ಯವಿರುವ ವೇತನ ಪಾವತಿಸಬೇಕು ಮುಂತಾದ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಎಂಎಸ್ ಕಾಸರಗೋಡು ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನ ಮೆರವಣಿಗೆ ಮತ್ತು ಧರಣಿ ನಡೆಯಿತು. ಬಿ.ಎಂ.ಎಸ್. ದಕ್ಷಿಣ ಕ್ಷೇತ್ರ ಜತೆ ಕಾರ್ಯದರ್ಶಿ ಎಂ.ಪಿ.ರಾಜೀವನ್ ಸಮಾರಂಭ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ವಿ.ವಿ. ಬಾಲಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಬಿಎಂಎಸ್ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ವಿ ಬಾಬು, ದಿನೇಶ್ ಪಿ, ಸಿಂಧು ಪಿ, ಗೀತಾ ಬಾಲಕೃಷ್ಣನ್ ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ವಿ.ಗೋವಿಂದನ್ ಮಡಿಕೈ ಸ್ವಾಗತಿಸಿದರು. ಜಿಲ್ಲಾ ಜತೆ ಕಾರ್ಯದರ್ಶಿ ಕೆ. ಉಪೇಂದ್ರನ್ ವಂದಿಸಿದರು.
ಪ್ರತಿಭಟನ ಮೆರವಣಿಗೆಯಲ್ಲಿ ಜಿಲ್ಲಾ ಪದಾಧಿಕಾರಿಗಳಾದ ಅನಿಲ್ ಬಿ ನಾಯರ್, ಎಂ.ಕೆ.ರಾಘವನ್, ಹರೀಶ್, ವಿಶ್ವನಾಥ ಶಟ್ಟರ್, ಶ್ರೀನಿವಾಸನ್, ಕೃಷ್ಣಕುಮಾರ್. ವಿ ಬಿ ಸತ್ಯನಾಥ್ ಮತ್ತು ಲೀಲಾಕೃಷ್ಣನ್. ಪುರುಷೋತ್ತಮ್ ರವಿ, ಶಿವರಾಮನ್ ಭರತನ್ ಸುನಿಲ್. ಅನುಪ್. ಸುರೇಶ್ .ತಂಪನ್ ರವೀಂದ್ರನ್. ಕುಂಜಿಕೃಷ್ಣನ್. ಭಾಸ್ಕರ್ ಚಂದ್ರಶೇಖರನ್. ಗುರುದಾಸ್ ನೇತೃತ್ವ ವಹಿಸಿದ್ದರು.