ಆರು ತಿಂಗಳವರೆಗೆ ಮಕ್ಕಳಿಗೆ ಕೇವಲ ದ್ರವ ಆಹಾರವನ್ನು ಮಾತ್ರ ನೀಡಲಾಗುತ್ತದೆ.
ಹೀಗಾಗಿ ತಾಯಿ ಎದೆಹಾಲು ಹಾಗೂ ಬಾಟಲ್ ಹಾಲನ್ನು ನೀಡಲಾಗುತ್ತದೆ. ದ್ರವ ರೂಪದ
ಆಹಾರವನ್ನು ಸಾಕಷ್ಟು ಪ್ರಮಾಣದಲ್ಲಿ ನೀಡಿದರೂ ಕೂಡ ಕೆಲವೊಂದು ಸಾರಿ ಮಕ್ಕಳು
ಡಿಹೈಡ್ರೇಷನ್‌ಗೆ ಒಳಗಾಗಿ ಬಿಡುತ್ತಾರೆ. ಆದರೆ ಪೋಷಕರಿಗೆ ಈ ವಿಚಾರದ ಬಗ್ಗೆ ಹೆಚ್ಚಿನ
ಬಾರಿ ಗೊತ್ತಾಗೋದೇ ಇಲ್ಲ. ಆದ್ದರಿಂದ ಈ ಬಗ್ಗೆ ಪೋಷಕರು ಎಚ್ಚರಿಕೆ ವಹಿಸೋದು ಮುಖ್ಯ.
ಮಕ್ಕಳ ದೇಹವು ಕೂಡ ಚಿಕ್ಕದಾಗಿರುವುದರಿಂದ ನೀರಿನ ಅಂಶದ ಕೊರತೆ ಆದ ತಕ್ಷಣ ಮಗು
ಡಿಹೈಡ್ರೇಷನ್‌ಗೆ ಒಳಗಾಗಿ ಬಿಡುತ್ತದೆ. ಇದರಿಂದ ಮಗುವಿನ ಆರೋಗ್ಯದಲ್ಲಿ ಅನೇಕ
ಬದಲಾವಣೆಗಳು ಆಗುತ್ತದೆ. ಅಷ್ಟಕ್ಕು ನಿಮ್ಮ ಮಗು ಡಿಹೈಡ್ರೇಷನ್‌ಗೆ ಒಳಗಾಗಿದೆ ಎಂದು
ಗೊತ್ತಾಗೋದು ಹೇಗೆ? ಅದರ ಗುಣಲಕ್ಷಣಗಳು ಏನು? ಮನೆಯಲ್ಲಿ ಇದಕ್ಕೆ ಯಾವ ರೀತಿ
ಪರಿಹಾರವನ್ನು ಕಂಡುಕೊಳ್ಳಬುದು ಅನ್ನೋದನ್ನ ತಿಳಿಯೋಣ.
ನವಜಾತ ಶಿಶುವಿನಲ್ಲಿ ನಿರ್ಜಲೀಕರಣದ ಲಕ್ಷಣ ಹೇಗಿರುತ್ತದೆ?
* ತಲೆಯ ಮೇಲ್ಭಾಗದಲ್ಲಿ ಗುಳಿಬಿದ್ದ ಮೃದು ಚುಕ್ಕೆ
* ಮಗು ಹೆಚ್ಚಿನ ಕಾಲ ನಿದ್ರಿಸುವುದು
* ಅಳುವಾಗ ಸ್ವಲ್ಪ ಕಣ್ಣೀರು ಮಾತ್ರ ಬರುತ್ತದೆ
* ಕೆಲ ಮಕ್ಕಳಂತೂ ಅತ್ತರೂ ಕಣ್ಣೀರು ಬರೋದಿಲ್ಲ
* ಗಡಿಬಿಡಿಯಲ್ಲಿರುತ್ತಾರೆ
* ಶೀತ
*ಸುಕ್ಕು ಗಟ್ಟಿದ ಚರ್ಮ
ಅಂಬೆಗಾಲಿಡುವ ಮಕ್ಕಳಲ್ಲಿ ನಿರ್ಜಲೀಕರಣದ ಲಕ್ಷಣ ಹೇಗಿರುತ್ತದೆ?
* ಆಟ ಆಡೋದಕ್ಕೆ ಹೋಗಲು ಇಷ್ಟ ಪಡೋದಿಲ್ಲ
* ಸಾಧಾರಣ ಆರು ಗಂಟೆಗಳವರೆಗೂ ಡೈಪರ್ ಒದ್ದೆ ಆಗಿರೋದಿಲ್ಲ
* ದಣಿದಂತೆ ಕಾಣುತ್ತಾರೆ
* ಗುಳಿಬಿದ್ದ ಕಣ್ಣುಗಳು
* ಅತ್ತರೂ ಕಣ್ಣೀರು ಬರೋದಿಲ್ಲ
* ಒಣಗಿದ ಬಾಯಿ
* ಮಲ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ
* ತಣ್ಣಗಾದ ಕೈಗಳು
* ಹೃದಯದ ಬಡಿತ ಹೆಚ್ಚಾಗಿರುತ್ತದೆ
* ಉಸಿರಾಟದ ವೇಗ ಹೆಚ್ಚಾಗಿರುತ್ತದೆ
ಶಿಶುವಿಗೆ ನಿರ್ಜಲೀಕರಣ ಉಂಟಾಗಲು ಕಾರಣಗಳೇನು?
* ಹುಟ್ಟಿದ ಮಗುವಿಗೆ ಮೊಲೆತೊಟ್ಟನ್ನು ಸರಿಯಾಗಿ ಹಿಡಿದಿಟ್ಟುಕೊಳ್ಳಲು ಆಗೋದಿಲ್ಲ
* ಆರಂಭದಲ್ಲಿ ಎದೆಹಾಲು ಕಡಿಮೆ ಪ್ರಮಾಣದಲ್ಲಿ ಇರುತ್ತದೆ
* ಮಗುವಿಗೆ ಮೊಲೆತೊಟ್ಟು ಅಥವಾ ಬಾಟಲಿಯಿಂದ ಹಾಲನ್ನು ಸಮರ್ಪಕವಾಗಿ ಹೀರಲು ಸಾಧ್ಯವಾಗುವುದಿಲ್ಲ.
* ತಿಂದ ಆಹಾರವನ್ನು ಶಿಶು ಅಧಿಕ ಬಾರಿ ವಾಂತಿ ರೂಪದಲ್ಲಿ ಹೊರಹಾಕುತ್ತದೆ
ಅಂಬೆಗಾಲಿಡುವ ಮಕ್ಕಳಿಗೆ ನಿರ್ಜಲೀಕರಣ ಉಂಟಾಗಲು ಕಾರಣಗಳೇನು?
* ಅತಿಸಾರ
* ಬೆವರುವುದು
* ಜ್ವರ
* ಉಷ್ಣಾಂಶ ಹೆಚ್ಚಾಗುವುದು
ನಿರ್ಜಲೀಕರಣ ಸಮಸ್ಯೆಗೆ ಪರಿಹಾರವೇನು?
1. ಪ್ರತಿನಿತ್ಯ ತಾಯಿ ಎದೆಹಾಲು ನೀಡಿ
ತಾಯಿಯ ಎದೆಹಾಲು ಮಕ್ಕಳಿಗೆ ತುಂಬಾನೇ ಮುಖ್ಯ. ಆದರೆ ನವಜಾತ ಶಿಶುಗಳಿಗೆ ಎದೆಹಾಲನ್ನು
ಸರಿಯಾಗಿ ಕುಡಿಯೋದಕ್ಕೆ ಆಗೋದಿಲ್ಲ. ಮತ್ತು ಹೆಚ್ಚಿನ ಪ್ರಮಾಣದಲ್ಲಿ ಹಾಲು ಬಾರದೇ
ಇರುವುದರಿಂದ ಅವರು ಸ್ವಲ್ಪ ಹೊತ್ತು ಹಾಲು ಕುಡಿದು ನಂತರ ಸುಮ್ಮನಿರುತ್ತಾರೆ. ಇಂತಹ
ಸಮಯದಲ್ಲಿ ತಾಯಂದಿರು ಆಗಾಗ್ಗೆ ಮಗುವಿನ ಹಾಲು ಕುಡಿಸುತ್ತಿರಬೇಕು. ಇನ್ನೂ ಮಗುವಿಗೆ
ನೇರವಾಗಿ ಎದೆ ಹಾಲು ಕುಡಿಯುವುದು ಕಷ್ಟವಾದರೆ ಎದೆಹಾಲನ್ನು ಬಾಟಲ್ ಹಾಕಿ ಶಿಶುವಿಗೆ
ನೀಡಿ.
2. ತೆಲುವಾದ ಬಟ್ಟೆಗಳನ್ನೇ ಧರಿಸಿ
ನವಜಾತ ಶಿಶು ಅಥವಾ ಅಂಬೆಗಾಲಿಡುವ ಮಕ್ಕಳಿಗೆ ಆದಷ್ಟು ತೆಲುವಾದ ಬಟ್ಟೆಯನ್ನೇ ಧರಿಸಿ.
ಇಲ್ಲದಿದ್ದರೆ ಅವರಿಗೆ ಮಲಗೋದಕ್ಕೆ ಸಮಸ್ಯೆಯಾಗಬಹುದು. ಜೊತೆಗೆ ರಾತ್ರಿಯಲ್ಲಿ ಅತಿಯಾಗಿ
ಬೆವರುತ್ತಾರೆ. ಇನ್ನೂ ನವಜಾತ ಶಿಶುವು ತಾಯಿ ಎದೆಹಾಲು ಕುಡಿದ ಕ್ಷಣ ಮಾತ್ರದಲ್ಲೇ ವಾಂತಿ
ಮಾಡುಕೊಳ್ಳುತ್ತದೆ. ಇದಕ್ಕೆ ಕಾರಣ ಮಗುವಿನ ದೇಹದೊಳಗಡೆ ಹಾಲು ಸರಿಯಾಗಿ ಜೀರ್ಣವಾಗದೇ
ಇರುವುದು. ಈ ಬಗ್ಗೆ ಕೂಡ ಜಾಗೃತೆ ವಹಿಸಬೇಕು.
3. ಜ್ವರ ಇದ್ದಾಗ ಸ್ಪಾಂಜ್‌ನಿಂದ ಸ್ನಾನ ಮಾಡಿಸಿ
ಮಕ್ಕಳಿಗೆ ಜ್ವರ ಇದ್ದ ಸಂದರ್ಭದಲ್ಲಿ ಸ್ನಾನ ಮಾಡಿಸಲೇಬಾರದು. ಹಾಗೊಂದು ವೇಳೆ ಸ್ನಾನ
ಮಾಡಿಸಲೇ ಬೇಕೆಂದಿದ್ದರೆ ಸ್ಪಾಂಜ್ ಅನ್ನು ಹದಾ ಬೆಚ್ಚಗಿನ ನೀರಿನಲ್ಲಿ ಅದ್ದಿ ಸ್ನಾನ
ಮಾಡಿಸಬಹುದು. ಸ್ವಲ್ಪ ದೊಡ್ಡ ಮಕ್ಕಳಿಗೆ ನೀವು ಮನೆಯಲ್ಲೇ ಹಣ್ಣಿನಿಂದ ತಯಾರಿಸಿದ
ಸುಗರ್ ಫ್ರೀ ಕ್ಯಾಂಡಿಗಳನ್ನು ನೀಡಬಹುದು. ಕ್ಯಾಂಡಿ ಎಂದರೆ ಮಕ್ಕಳು ಇಷ್ಟ ಪಟ್ಟು
ತಿನ್ನುತ್ತಾರೆ. ಹಾಗೂ ಡಿಹೈಡ್ರೇಷನ್‌ನ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
4. ಜಲಾಂಶ ಪೂರಿತ ಹಣ್ಣುಗಳನ್ನು ನೀಡಿ
ಮಕ್ಕಳು ಹೆಚ್ಚಾಗಿ ನೀರು ಕುಡಿಯೋದಕ್ಕೆ ಇಷ್ಟ ಪಡೋದಿಲ್ಲ. ಇಂತಹ ಸಂದರ್ಭದಲ್ಲಿ
ಅವರಿಗಾಗಿ ಒಂದು ಬಾಟಲ್ ನೀಡಿ. ಅದರಲ್ಲಿ ನೀರು ತುಂಬಿಸಿ ಅವರ ಕೈಗೆ ಎಟಕುವ ಹಾಗಿ ಇಡಿ.
ಇನ್ನೊಂದು ಉಪಾಯ ಅಂದರೆ ಕಲ್ಲಂಗಡಿ, ಕರ್ಬೂಜ, ಸೌತೆಕಾಯಿಯನ್ನು ಮಕ್ಕಳಿಗೆ ಕೊಡಿ. ಈ
ಹಣ್ಣುಗಳ ಮೂಲಕ ಅವರ ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತದೆ. ಆದರೆ
ಯಾವುದೇ ಕಾರಣಕ್ಕೂ ಡಿಹೈಡ್ರೇಟ್ ಆಗೋದಕ್ಕೆ ಬಿಡಲೇಬೇಡಿ.
ಮಕ್ಕಳಲ್ಲಿ ನಿರ್ಜಲೀಕರಣ ಉಂಟಾದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತದೆ.
ಹೀಗಾಗಿ ಆರೋಗ್ಯ ಸಮಸ್ಯೆ ಎದುರಾಗುವ ಮುನ್ನವೇ ಪೋಷಕರು ಎಚ್ಚೆತ್ತುಕೊಂಡರೆ ತುಂಬಾನೇ
ಒಳ್ಳೆಯದು.