ಕಾಸರಗೋಡು: ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ ಮತ್ತು ಮುಂಗಾರು ಪೂರ್ವ ಸ್ವಚ್ಛತೆಯ ಅಂಗವಾಗಿ ಕಾಂಞಂಗಾಡ್ ನಗರಸಭೆ ವತಿಯಿಂದ"ಆರೋಗ್ಯ ಸುರಕ್ಷತೆಗಾಗಿ ಕಸ ಮುಕ್ತ ಕೇರಳ" ಮತ್ತು "ಸ್ವಚ್ಛ ಕೇರಳ-ತ್ಯಾಜ್ಯ ಮುಕ್ತ ಕೇರಳ" ಘೋಷಣೆಯೊಂದಿಗೆ ಸಾರ್ವಜನಿಕ ಸ್ವಚ್ಛತಾಕಾರ್ಯ ನಡೆಸಲಾಯಿತು.
ಕೋಟಚ್ಚೇರಿಯ ಮೀನು ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಸಮಾರಂಭವನ್ನು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ ಉದ್ಘಾಟಿಸಿದರು. ಹಸಿರು ಕ್ರಿಯಾ ಸೇನೆ, ಮೀನು ಕಾರ್ಮಿಕರು, ವಿವಿಧ ಸ್ವಯಂಸೇವಾ ಸಂಸ್ಥೆಗಳು ನಗರಸಭೆ ಸ್ವಚ್ಛತಾ ವಿಭಾಗದ ಕಾರ್ಯಕರ್ತರು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಸರಸ್ವತಿ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ.ವಿ.ಮಾಯಾಕುಮಾರಿ, ನಗರಸಭಾ ಸದಸ್ಯರಾದ ಟಿ.ವಿ.ಸುಜಿತ್ ಕುಮಾರ್, ಕೆ.ವಿ.ಸುಶೀಲ, ಎನ್.ಅಶೋಕನ್, ಟಿ.ವಿ.ಮೋಹನನ್, ಕಾಞಂಗಾಡು ನಗರಸಭೆಯ ಮಾಜಿ ಅಧ್ಯಕ್ಷ ವಿ.ವಿ.ರಮೇಶನ್, ನಗರಸಭಾ ಕಾರ್ಯದರ್ಶಿ ಪಿ.ಶ್ರೀಜಿತ್ ಉಪಸ್ಥಿತರಿದ್ದರು.
ಮನೆ, ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ತ್ಯಾಜ್ಯದಿಂದ ಮುಕ್ತವಾಗಿಡುವ ಮೂಲಕ ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ, ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಲು ಹಸಿರು ಪೆÇ್ರೀಟೋಕಾಲ್ ಅನುಷ್ಠಾನ ಮತ್ತು ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ, ಹಸಿರು ಕ್ರಿಯಾ ಸೇನೆಯ ಸಮರ್ಪಕ ಕಾರ್ಯನಿರ್ವಹಣೆ, ಪ್ರತಿ ಭಾನುವಾರ ಡ್ರೈ ಡೇ ಆಚರಿಸುವ ಮೂಲಕ ಮನೆ ಬಾಗಿಲಿಗೆ ತೆರಳಿ ಕಸ ಸಂಗ್ರಹ ಬಲಪಡಿಸುವುದು, ಅಗತ್ಯ ಜಾಗೃತಿ ಚಟುವಟಿಕೆಗಳನ್ನು ಕೈಗೊಳ್ಳುವುದು ಮತ್ತು ಸೊಳ್ಳೆ ಮುಕ್ತ ಮನೆಗಳ ಪರಿಕಲ್ಪನೆಯನ್ನು ಅನುಷ್ಠಾನಗೊಳಿಸುವ ಗುರಿಯೊಂದಿಗೆ ನಗರಸಭೆ ಮುಂದುವರಿಯಲಿರುವುದಾಗಿ ಅಧ್ಯಕ್ಷೆ ಕೆ.ವಿ ಸಉಜಾತಾ ತಿಳಿಸಿದ್ದಾರೆ.
ಕಾಞಂಗಾಡು ನಗರಸಭೆ ವತಿಯಿಂದ ಸಾರ್ವಜನಿಕ ಸ್ವಚ್ಛತಾ ಕಾರ್ಯಕ್ಕೆ ಚಾಲನೆ
0
ಏಪ್ರಿಲ್ 12, 2023
Tags