ಪೆರ್ಲ: ಮಕ್ಕಳು ವರ್ಷವಿಡೀ ಕಲಿತ ವಿಚಾರಗಳನ್ನು ರಕ್ಷಕರೆದುರು ಮಂಡಿಸಲು ಕಲಿಕೋತ್ಸವ ವೇದಿಕೆಯಾಗಲಿ ಎಂದು ಎಣ್ಮಕಜೆ ಗ್ರಾಮ ಪಂಚಾಯಿತಿಯ ಸದಸ್ಯೆ ಆಶಾಲತ ನುಡಿದರು.
ನಲ್ಕದ ವಾಗ್ದೇವಿ ಕಿರಿಯ ಪ್ರಾಥಮಿಕ ಶಾಲೆಯ ಕಲಿಕೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದು ಶಾಲೆಗಳಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯ ಶಿಕ್ಷಣ ಸಿಗಲು ರಕ್ಷಕರು, ಸಮಾಜ ಬೆಂಬಲ ನೀಡಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಸಮಾಜ ಸೇವಕ ಅಬ್ಬಾಸ್ ನಲ್ಕ ಶುಭ ಹಾರೈಸಿದರು. ಮಾತೃ ರಕ್ಷಕ ಮಂಡಳಿಯ ಸುಮಲತ ಕುದ್ಕೋಳಿ ಶುಭಾಶಂಶನೆಗೈದರು. ಶಾಲೆಯ ಮುಖ್ಯ ಶಿಕ್ಷಕ ಶ್ರೀಪತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಮತಾ ವಂದಿಸಿದರು. ಶಿಕ್ಷಕಿ ನಳಿನಿ ನಿರೂಪಿಸಿದರು. ಉಷಾದೇವಿ ಸಹಕರಿಸಿದರು. ಈ ಸಂದರ್ಭ ಪಂಚಾಯತಿ ಮಟ್ಟದ ಭಾಷೋತ್ಸವದಲ್ಲಿ ಭಾಗವಹಿಸಿದ ಮಕ್ಕಳನ್ನು ಮತ್ತು ರಕ್ಷಕರನ್ನು ಅಭಿನಂದಿಸಲಾಯಿತು. ಮಕ್ಕಳಿಂದ ಕಲಿಕೆಗೆ ಸಂಬಂಧಿಸಿದ ಹಾಡು, ಪ್ರಹಸನ ಪ್ರದರ್ಶಿಸಲ್ಪಟ್ಟಿತು.
ನಲ್ಕ ವಾಗ್ದೇವಿ ಶಾಲಾ ಕಲಿಕೋತ್ಸವ
0
ಏಪ್ರಿಲ್ 01, 2023