HEALTH TIPS

ಜಾರ್ಖಂಡ್: ಭದ್ರತಾ ಪಡೆಗಳ ಮೇಲೆ ಮಾವೋವಾದಿ ದಾಳಿಗೆ ಸಂಚು, ಓರ್ವ ನಕ್ಸಲ್ ಎನ್ಐಎ ವಶಕ್ಕೆ

 

NIA

              ನವದೆಹಲಿ: ಜಾರ್ಖಂಡ್ ನಲ್ಲಿ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ರಾಷ್ಟ್ರೀಯ ತನಿಖಾ ದಳ 14 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದು, ಓರ್ವನನ್ನು ಬಂಧಿಸಿದೆ. 

                          ಕಳೆದ ವರ್ಷ ಭದ್ರತಾ ಪಡೆಗಳ ಮೇಲೆ ಜಾರ್ಖಂಡ್ ನಲ್ಲಿ ದಾಳಿ ನಡೆಸಲು ಸಿಪಿಐ-ಮಾವೋವಾದಿ ಸಿಬ್ಬಂದಿಗಳು ಸಂಚು ರೂಪಿಸಿದ್ದರು.

                 ಲೋಹರ್ದಗಾದಲ್ಲಿ 9 ಸ್ಥಳಗಳು ಹಾಗೂ ಲತೇಹರ್ ನಲ್ಲಿ 5 ಜಿಲ್ಲೆಗಳಲ್ಲಿ ಎನ್ಐಎ ದಾಳಿ ನಡೆಸಿದ್ದು, ಶಂಕಿತರಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ಶೋಧಕಾರ್ಯಾಚರಣೆ ನಡೆಸಲಾಗಿದೆ ಎಂದು ಎನ್ಐಎ ವಕ್ತಾರರು ಹೇಳಿದ್ದಾರೆ. ದಾಳಿಯ ವೇಳೆ ನಾಡ ಬಂದೂಕು 6 ಜಿವಂತ ಗುಂಡುಗಳು, ಒಂದು ಮ್ಯಾಗ್ಜೈನ್, ಎಲೆಕ್ಟ್ರಾನಿಕ್ ಗ್ಯಾಡ್ಜೆಟ್ ಗಳು ಹಾಗೂ ಹಣಕಾಸಿಗೆ ಸಂಬಂಧಪಟ್ಟ ವಹಿವಾಟುಗಳ ವಿವರಗಳನ್ನು ದಾಳಿಯ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.    ದಾಳಿಯ ವೇಳೆ ಸಜನ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries