ಕೊಚ್ಚಿ: ಕಳೆದ ವಾರ ಕೇರಳ ಕಾಂಗ್ರೆಸ್(ಜೋಸೆಫ್) ತೊರೆದಿದ್ದ ವಿಕ್ಟರ್ ಟಿ ಥಾಮಸ್ ಅವರು ಭಾನುವಾರ ಭಾರತೀಯ ಜನತಾ ಪಕ್ಷ(ಬಿಜೆಪಿ) ಸೇರಿದ್ದಾರೆ.
ಭಾನುವಾರ ಕೊಚ್ಚಿಯ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇರಳ ಬಿಜೆಪಿ ಪ್ರಭಾರಿ ಪ್ರಕಾಶ್ ಜಾವಡೇಕರ್ ಅವರ ಸಮ್ಮುಖದಲ್ಲಿ ವಿಕ್ಟರ್ ಥಾಮಸ್ ಅವವರು ಬಿಜೆಪಿ ಸೇರಿದರು.
ಥಾಮಸ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರೊಂದಿಗೆ ಪಕ್ಷದ ಕಚೇರಿಗೆ ಆಗಮಿಸಿದ ಬಳಿಕ ಬಿಜೆಪಿ ಸೇರುವ ನಿರ್ಧಾರ ಪ್ರಕಟಿಸಿದರು. ವಿಕ್ಟರ್ ಥಾಮಸ್ ಅವರು ಕೇರಳ ಕಾಂಗ್ರೆಸ್(ಜೋಸೆಫ್)ನ ಪತ್ತನಂತಿಟ್ಟ ಜಿಲ್ಲಾ ಅಧ್ಯಕ್ಷರಾಗಿದ್ದರು. ಅಲ್ಲದೆ ಪತ್ತನಂತಿಟ್ಟ ಯುಡಿಎಫ್ ಜಿಲ್ಲಾಧ್ಯಕ್ಷರೂ ಆಗಿದ್ದರು. "ಕೇರಳದಲ್ಲಿ ವಿಕ್ಟರ್ ಥಾಮಸ್ ಅವರ ಬಿಜೆಪಿ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಶಕ್ತಿ ನೀಡಿದೆ. ಎಲ್ ಡಿಎಫ್ ಮತ್ತು ಯುಡಿಎಫ್ ಕೇರಳ ಅಭಿವೃದ್ಧಿ ಮಾಡುವಲ್ಲಿ ವಿಫಲವಾಗಿವೆ" ಎಂದು ಜಾವಡೇಕರ್ ಹೇಳಿದರು.