ಕಾಸರಗೋಡು: ನಗರಸಭಾ ವ್ಯಾಪ್ತಿಯಲ್ಲಿ ಮಳೆಗಾಲಪೂರ್ವ ಸ್ವಚ್ಛತೆ ಮತ್ತು ರೋಗ ತಡೆ ಕ್ರಮಗಳ ಅಂಗವಾಗಿ ನಗರಸಭೆ ವತಿಯಿಂದ ವಿವಿಧ ಹಂತಗಳಲ್ಲಿ ಕೈಗೊಂಡಿರುವ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ ವಿ.ಎಂ.ಮುನೀರ್ ಶುಚೀಕರಣಕಾರ್ಯಕ್ಕೆ ಚಾಲನೆ ನೀಡಿದರು. ಪಳ್ಳಿಕ್ಕಲ್ ಉಬೈದ್ ಸ್ಮಾರಕ ಬಸ್ ನಿಲ್ದಾಣದ ಸನಿಹ ನಡೆದ ಸಮಾರಂಭದಲ್ಲಿ ಅಭಿವೃದ್ಧಿ ಕಾರ್ಯಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ಅಬ್ಬಾಸ್ ಬೇಗಂ ಅಧ್ಯಕ್ಷತೆ ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರಾದ ಆರ್. ರೀಟಾ, ಸಿಯಾನಾ ಹನೀಫ್ , ಕೆ. ರಜನಿ, ನಗರಸಭಾ ಸದಸ್ಯರದ ಪಿ. ಲಲಿತಾ, ಸವಿತಾ ಟೀಚರ್, ನಗರಸಭೆ ಕಾರ್ಯದರ್ಶಿ ಎನ್. ಸುರೇಶ್ ಕುಮಾರ್, ಎಸ್‍ಪಿಸಿ ಸಂಯೋಜಕಿ ಸಂಧ್ಯಾ ಉಪಸ್ಥಿತರಿದ್ದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಖಾಲಿದ್ ಪಚ್ಚಕಾಡ್ ಸ್ವಾಗತಿಸಿದರು. ಕ್ಲೀನ್ ಸಿಟಿ ಪ್ರಬಂಧಕ ಎ.ಪಿ. ರಂಜಿತ್ ಕುಮಾರ್ ವಂದಿಸಿದರು. ಉದ್ಘಾಟನಾ ಸಅಭಿಯಾನದ ಅಂಗವಾಗಿ ರೈಲ್ವೆ ನಿಲ್ದಾಣ, ಪಳ್ಳಿಕಲ್ ಬಸ್ ನಿಲ್ದಾಣ, ಕೋಟೆ ರಸ್ತೆ, ಟ್ರಾಫಿಕ್ ಸಿಗ್ನಲ್, ತಾಲೂಕು ಕಚೇರಿ ರಸ್ತೆ, ಕೆಪಿಆರ್ ರಾವ್ ರಸ್ತೆ ಹಾಗೂ ಹಳೇ ಬಸ್ ನಿಲ್ದಾಣದ ಕಟ್ಟಡಗಳನ್ನು ಸ್ವಚ್ಛಗೊಳಿಸಲಾಯಿತು. ಎನ್‍ಸಿಸಿ, ಎಸ್‍ಪಿಸಿ, ಎನ್‍ಎಸ್‍ಎಸ್ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಶುಚಿತ್ವ ಮಿಷನ್ ಕಾರ್ಯಕರ್ತರು ಭಾಗವಹಿಸಿದ್ದರು.
ಮುಂಗಾರು ಪೂರ್ವ ಸ್ವಚ್ಛತೆ: ಕಾಸರಗೋಡು ಪುರಸಭೆ ಮಟ್ಟದ ಉದ್ಘಾಟನೆ
0
ಏಪ್ರಿಲ್ 14, 2023
Tags