ಕುಂಬಳೆ: ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿ ಹೊಂದಿದ ಸೂರಂಬೈಲು ಸರ್ಕಾರಿ ಹೈಸ್ಕೂಲಿನ ಅಧ್ಯಾಪಿಕೆ ಜ್ಯೋತಿ ಟೀಚರ್ ಅವರಿಗೆ ಶಾಲಾ ನೌಕರ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು. ಸೂರಂಬೈಲು ಸಮೀಪದ ಪೆರ್ಣೆ ನಿವಾಸಿಯಾದ ಜ್ಯೋತಿ ಟೀಚರ್ 2005ರಲ್ಲಿ ಉದಯಗಿರಿ ಶಾಲೆಯಲ್ಲಿ ಸರ್ಕಾರಿ ಸೇವೆಗೆ ಸೇರ್ಪಡೆಗೊಂಡರು. ನಂತರ ಅಂಗಡಿಮೊಗರು ಶಾಲೆ, ಜಿ ಎಸ್ ಬಿ ಎಸ್ ಕುಂಬಳೆ, ಜಿ ಎಚ್ ಎಸ್ ಸೂರಂಬೈಲು ಶಾಲೆಯಲ್ಲಿ ಶಿಕ್ಷಕಿಯಾಗಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿ ಇದೀಗ ಕಜಂಪಾಡಿ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಭಡ್ತಿಹೊಂದಿದ್ದಾರೆ.
ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ದಯಾನಂದ ಪೆರ್ಣೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋದಾಧ್ಯಾಯಿನಿ ಸುಚೇತ ಕೆ, ಶಾಲಾ ನೌಕರರ ಸಂಘದ ಕಾರ್ಯದರ್ಶಿ ಕಿರಣ್ ಕೆ, ವಿನಯಕುಮಾರಿ ಪಿ, ಆಯಿಷ ಎಂ, ಮೋಹನ ನಾರಾಯಣ ಅನಂತಪುರ, ಪ್ರಸನ್ನ ಕುಮಾರಿ, ಸೌದತ್ ಕೆ ಪಿ, ಗೀತ ಎನ್, ಇಸ್ಮಾಯಿಲ್ ಕೆ ಕೆ, ಶುಭ ಪಿ, ಅಬೂಬಕರ್ ಕೆ, ರಾಧಾಕೃಷ್ಣ ಎಂ, ಲಾರೆಟ್ ಮಾತನಾಡಿದರು.