HEALTH TIPS

ತರಗತಿಗೆ ಹಾಜರಾಗದೆಯೇ ಚಾಟ್‌ಜಿಪಿಟಿ ಬಳಸಿಕೊಂಡು ಪರೀಕ್ಷೆಗೆ ತಯಾರಾದ ವಿದ್ಯಾರ್ಥಿ!

                 ತಂತ್ರಜ್ಞಾನ (Technology) ಯುಗದಲ್ಲಿ ಚಾಟ್‌ಜಿಪಿಟಿಯು (ChatGPT) ಹೆಚ್ಚಿನ ಕ್ಷೇತ್ರಗಳಲ್ಲಿ ಪವಾಡವನ್ನೇ ಸೃಷ್ಟಿಸುತ್ತಿದೆ. ಚಾಟ್‌ಜಿಪಿಟಿ ಶಿಕ್ಷಣ, ತಂತ್ರಜ್ಞಾನ, ಬ್ಯುಸಿನೆಸ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಮಾಲ್ ಮಾಡುತ್ತಿದೆ. ಕೆಲವೊಂದು ಸಂಸ್ಥೆಗಳು ಚಾಟ್‌ಜಿಪಿಟಿಯನ್ನು ಪ್ರಾಯೋಗಿಕವಾಗಿ ತಮ್ಮ ಕೆಲವೊಂದು ಯೋಜನೆಗಳಲ್ಲಿ ಬಳಸಿಕೊಂಡಿದ್ದು ಸಫಲತೆಯನ್ನು ಗಳಿಸಿವೆ. ಒಟ್ಟಿನಲ್ಲಿ ಚಾಟ್‌ಜಿಪಿಟಿ ಹೊಸ ಕ್ರಾಂತಿಯನ್ನೇ ಸೃಷ್ಟಿಸುತ್ತಿದೆ.

                     ಇದೀಗ ರೆಡ್ಡಿಟ್‌ನಲ್ಲಿ ಚಾಟ್‌ಜಿಪಿಟಿಯ ಅನುಭವಗಳನ್ನು ಹಂಚಿಕೊಂಡಿರುವ u/151N ಬಳಕೆದಾರ ಹೆಸರಿನ ವಿದ್ಯಾರ್ಥಿಯೊಬ್ಬರು ಬರೇ ಮೂರು ದಿನಗಳಲ್ಲಿ ನಡೆಯುವ ಪರೀಕ್ಷೆಗೆ ತಯಾರಿ ನಡೆಸಲು ಚಾಟ್‌ಜಿಪಿಟಿಯನ್ನು ಹೇಗೆ ಬಳಸಿಕೊಂಡರು ಎಂಬ ಅನುಭವವನ್ನು ಹಂಚಿಕೊಂಡಿದ್ದಾರೆ.

                                 ಚಾಟ್‌ಜಿಪಿಟಿ ಬಳಸಿಕೊಂಡು ಪರೀಕ್ಷೆಗೆ ತಯಾರಾದ ವಿದ್ಯಾರ್ಥಿ

                 u/151N ಹೆಸರಿನ ಈ ವಿದ್ಯಾರ್ಥಿಯ ಪರೀಕ್ಷೆಗೆ ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿತ್ತು, ತರಗತಿಗಳಲ್ಲಿ ನಡೆದ ಯಾವುದೇ ಪಾಠ ಪ್ರವಚನಗಳಿಗೆ ಈ ವಿದ್ಯಾರ್ಥಿ ಹಾಜರಾಗಿರಲಿಲ್ಲ. ಅಂತೆಯೇ ಪಠ್ಯಗಳ ರೆಕಾರ್ಡಿಂಗ್‌ಗಳನ್ನು ಕೇಳಿರಲಿಲ್ಲ. ಏನು ಮಾಡುವುದು ಎಂಬ ಗೊಂದಲ ಹಾಗೂ ಭಯದಲ್ಲಿದ್ದಾಗ ನೆರವಿಗೆ ಬಂದಿದ್ದೇ ಚಾಟ್‌ಜಿಪಿಟಿ ಎಂದು ಆ ವಿದ್ಯಾರ್ಥಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

                  ತುಂಬಾ ಉದ್ದವಾಗಿದ್ದ ಕೆಲವೊಂದು ಪಾಠಗಳನ್ನು ಟ್ರಿಮ್ ಮಾಡಿ ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿಕೊಂಡು ಈ ವಿದ್ಯಾರ್ಥಿ ಪಾಠಗಳನ್ನು ಅರ್ಥಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.

                        ಹೀಗೆ ಚಾಟ್‌ಜಿಪಿಟಿಯ ಸಹಾಯದಿಂದ ಪರೀಕ್ಷೆಗೆ ಹಾಜರಾಗಲು ಹಾಗೂ ಪರೀಕ್ಷೆಯನ್ನು ಎದುರಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

                        12 ವಾರಗಳ ಪಾಠಗಳನ್ನು ಚಾಟ್‌ಜಿಪಿಟಿ ನೆರವಿನಿಂದ ಮೂರೇ ದಿನಗಳಲ್ಲಿ ಕಲಿತರು


                   12 ವಾರಗಳ ಪಾಠಗಳನ್ನು ಅಭ್ಯಾಸ ಮಾಡಲು ಈ ವಿದ್ಯಾರ್ಥಿಯ ಬಳಿ ಮೂರೇ ದಿನವಿತ್ತು. ವಿದ್ಯಾರ್ಥಿ ಇದಕ್ಕಾಗಿ ಚಾಟ್‌ಜಿಪಿಟಿಯ ಸಹಾಯವನ್ನು ಪಡೆದುಕೊಂಡಿದ್ದು ತರಗತಿಗಳಲ್ಲಿ ನಡೆದ ಅಧ್ಯಯನಗಳನ್ನೆಲ್ಲಾ ತ್ವರಿತವಾಗಿ ಅರಿತುಕೊಳ್ಳಲು ಹಾಗೂ ಉಪನ್ಯಾಸಕರು ಪಾಠ ಮಾಡಿದ ಅದೇ ಪಾಠಗಳನ್ನು ಕಲಿಯಲು ಚಾಟ್‌ಜಿಪಿಟಿ ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.

                            ಪಾಠಗಳನ್ನು ಟ್ರಿಮ್ ಮಾಡಿ ವಿವರಣೆ ಅರಿತುಕೊಂಡ ವಿದ್ಯಾರ್ಥಿ


                          ಈ ವಿದ್ಯಾರ್ಥಿ ಚಾಟ್‌ಜಿಪಿಟಿಯನ್ನು ಬಳಸಲು ಪಾಠಗಳ ಪ್ರತಿಗಳನ್ನು ಎಡಿಟ್ ಮಾಡಿದ್ದಾರೆ. ಪ್ಯಾರಾ ವೈಸ್ ಈ ವಿದ್ಯಾರ್ಥಿ ಚಾಟ್‌ಜಿಪಿಟಿಗೆ ಅಧ್ಯಯನ ವಿಷಯಗಳನ್ನು ತಿಳಿಸಿದ್ದು, ಇದರ ಸಾರಾಂಶ ಹಾಗೂ ಮೂಲಾಂಶಗಳನ್ನು ತಿಳಿಸಲು ಈ ಪರಿಕರದ ಸಹಾಯವನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

                  ಹೀಗೆ ಚಾಟ್‌ಜಿಪಿಟಿಯ ನೆರವಿನಿಂದ ಆ ವಿದ್ಯಾರ್ಥಿ ತರಗತಿಯ ಪಾಠ ಪ್ರವಚನಗಳೆಲ್ಲವನ್ನೂ ಚಾಚೂ ತಪ್ಪದೆ ಕವರ್ ಮಾಡಿಕೊಂಡಿರುವುದಾಗಿ ತಿಳಿಸಿದ್ದು 24-30 ಗಂಟೆಗಳ ಪಠ್ಯಪ್ರವಚನಗಳನ್ನು ಕೇವಲ 4-5 ಗಂಟೆಗಳಲ್ಲಿ ಪೂರ್ಣಗೊಳಿಸಿದರು ಹಾಗೂ ಎಷ್ಟು ಅಗತ್ಯವೋ ಅಷ್ಟು ವಿಷಯಗಳನ್ನು ಮಾತ್ರವೇ ಕಲಿತುಕೊಂಡಿರುವುದಾಗಿ ತಿಳಿಸಿದ್ದಾರೆ.


                  ಎರಡನೆಯ ದಿನದಲ್ಲಿ, ಪಾಠದ ಪಠ್ಯಪುಸ್ತಕ ಮತ್ತು ಸಾರಾಂಶದ ಪ್ರತಿಗಳನ್ನು ಮಾತ್ರ ಬಳಸಿಕೊಂಡು ಉಪನ್ಯಾಸಗಳಿಂದ ಪ್ರತಿ ಮಹತ್ವದ ಅಂಶಗಳನ್ನು ವಿವರಿಸಲು ಚಾಟ್‌ಜಿಪಿಟಿಯನ್ನು ಕೇಳಿದ್ದಾರೆ. ಕೊನೆಗೆ ಚಾಟ್‌ಜಿಪಿಟಿ ಒದಗಿಸಿದ ಮಾಹಿತಿಯನ್ನು ಪರಿಶೀಲಿಸಿದ್ದಾರೆ.


                  ಸರಳವಾಗಿ ಕಲಿಯಲು ಅನುಕೂಲಕರವಾಗಿದೆ

                 ಒಟ್ಟಿನಲ್ಲಿ ಚಾಟ್‌ಜಿಪಿಟಿಯ ಸಹಾಯದಿಂದ ಅಧ್ಯಯನ ವಿಷಯಗಳನ್ನು ಮನನ ಮಾಡಿಕೊಂಡಿರುವ ಈ ವಿದ್ಯಾರ್ಥಿ ತಂತ್ರಜ್ಞಾನಕ್ಕೆ ಧನ್ಯವಾದ ತಿಳಿಸಿದ್ದಾರೆ.

               ಚಾಟ್‌ಜಿಪಿಟಿಯಿಂದ ಈ ವಿದ್ಯಾರ್ಥಿ ಮೂರು ದಿನಗಳಲ್ಲಿ ಮಾರ್ಗದರ್ಶನ ಪಡೆದುಕೊಂಡಿದ್ದು ಇನ್ನಷ್ಟು ಸರಳವಾಗಿ ಕಲಿಯಲು ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ. ಚಾಟ್‌ಜಿಪಿಟಿ ಸಮಯಕ್ಕೆ ಸರಿಯಾಗಿ ನೆರವನ್ನು ನೀಡಿದೆ ಎಂದು ಅದರ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ.


                       ಸ್ಫೂರ್ತಿದಾಯಕ ಮಾಹಿತಿ

                 ಬೋಧಕರ ರೀತಿಯಂತೆಯೇ ಚಾಟ್‌ಜಿಪಿಟಿಯನ್ನು ಮಾರ್ಗದರ್ಶಕರಂತೆ ಬಳಸಿಕೊಂಡಿರುವ ಈ ವಿದ್ಯಾರ್ಥಿ ಪರೀಕ್ಷೆಗೆ ಉತ್ತಮವಾಗಿ ಸಿದ್ಧಗೊಳ್ಳಲು ಚಾಟ್‌ಜಿಪಿಡಿ ನೀಡಿದ ನೆರವನ್ನು ನೆನಸಿಕೊಂಡಿದ್ದಾರೆ.

                   ಈ ಸುದ್ದಿಯು ಸ್ಫೂರ್ತಿದಾಯಕ ಎಂದೆನಿಸಿದ್ದು ಶಿಕ್ಷಣದಲ್ಲಿ ಎಐಯ ಪಾತ್ರವನ್ನು ಎತ್ತಿತೋರಿಸಿದೆ ಅಂತೆಯೇ ತೋರಿಕೆಯಲ್ಲಿ ದುಸ್ತರವಾಗಿರುವ ಅಡೆತಡೆಗಳ ನಡುವೆಯೂ ಸಹ ಸೃಜನಶೀಲ ಚಿಂತನೆ ಮತ್ತು ನಿರ್ಣಯವು ಗಮನಾರ್ಹ ಫಲಿತಾಂಶಗಳಿಗೆ ಹೇಗೆ ಕಾರಣವಾಗಬಹುದು ಎಂಬುದನ್ನು ತೋರಿಸುತ್ತದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries