ಕೇದಾರನಾಥ : ಚಳಿಗಾಲದ ವಿರಾಮದ ನಂತರ ಮಂಗಳವಾರ ಬೆಳಗ್ಗೆ ಕೇದಾರನಾಥ ದೇಗುಲದ ಬಾಗಿಲು ತೆರೆಯಲಾಯಿತು. ಶೂನ್ಯ ತಾಪಮಾನದಲ್ಲೂ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಯಾತ್ರಿಕರು ಆಗಮಿಸಿದ್ದರು.
ಕೇದಾರನಾಥ : ಚಳಿಗಾಲದ ವಿರಾಮದ ನಂತರ ಮಂಗಳವಾರ ಬೆಳಗ್ಗೆ ಕೇದಾರನಾಥ ದೇಗುಲದ ಬಾಗಿಲು ತೆರೆಯಲಾಯಿತು. ಶೂನ್ಯ ತಾಪಮಾನದಲ್ಲೂ ಪ್ರಾರ್ಥನೆ ಸಲ್ಲಿಸಲು ಸಾವಿರಾರು ಯಾತ್ರಿಕರು ಆಗಮಿಸಿದ್ದರು.
ದೇವಸ್ಥಾನದ ಮುಖ್ಯ ಅರ್ಚಕ ರಾವಲ್ ಭೀಮಾ ಶಂಕರ್ ಲಿಂಗ್ ಅವರು ದೇವಾಲಯದ ಬಾಗಿಲು ತೆರೆದು, ಪೂಜೆ ನೆರವೇರಿಸಿದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು, 'ಕೇದಾರಿಪುರಿ ನಿರ್ಮಾಣದ ನೇತೃತ್ವ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಲ್ಲಿ ಮೊದಲ ಪೂಜೆ ಮಾಡಲಾಗಿದೆ' ಎಂದು ಹೇಳಿದರು.
ಕೇದಾರನಾಥದಲ್ಲಿನ ಸೌಲಭ್ಯಗಳನ್ನು ಸುಧಾರಿಸಲು ಮತ್ತು ತೀರ್ಥಯಾತ್ರೆಯನ್ನು ಸುರಕ್ಷಿತವಾಗಿ ಮತ್ತು ಭಕ್ತರಿಗೆ ಸುಲಭಗೊಳಿಸಲು ರಾಜ್ಯ ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.