ಆಲಪ್ಪುಳ: ಮೂರೂವರೆ ದಶಕಗಳ ಬಳಿಕ ಹಳೆ ವಿದ್ಯಾರ್ಥಿಗಳ ಸಮ್ಮಿಲನ ವಿವಾಹದಲ್ಲಿ ಪರ್ಯವಸಾನಗೊಂಡ ಅಪೂರ್ವ ಘಟನೆ ನಡೆದಿದೆ.
ಸುದೀರ್ಘ ವಿರಾಮದ ನಂತರ ಈ ಭೇಟಿ ನಡೆದಿತ್ತು. ತಮ್ಮ ಸ್ನೇಹಿತೆ ಪ್ರಿಯಾ ಇನ್ನೂ ವಿವಾಹಿತಳಾಗಿಲ್ಲ ಎಂದಲ್ಲಿ ಸ್ನೇಹಿತರಿಗೆ ತಿಳಿಯುತ್ತದೆ. ಕುಟುಂಬಸ್ಥರು, ಗೆಳೆಯರ ಬಳಗದ ಜತೆಗೆ ಪ್ರಿಯಾಳ ಸಂಗಾತಿಯಾಗಿ ಅನಿಲ್ ಕೈಹಿಡಿಯಲು ಮುಂದೆಬಮದರು. ನಿನ್ನೆ ಇಬ್ಬರೂ ವಿವಾಹಿತರಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.
ಚೇರ್ತಲ ಸೌತ್ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇತ್ತೀಚೆಗೆ 1987-88 ರ ಎಸ್‍ಎಸ್‍ಎಲ್‍ಸಿ ಬ್ಯಾಚ್‍ನ ಸಹಯೋಗದಲ್ಲಿ ಸುವರ್ಣಮುದ್ರ ಎಂಬ ಹೆಸರಿನ ಹಳೆಯ ವಿದ್ಯಾರ್ಥಿಗಳ ಮಿಲನವನ್ನು ಆಯೋಜಿಸಿತ್ತು. ಇದೇ ಸಂದರ್ಭದಲ್ಲಿ ಪ್ರಿಯಾ ವಿವಾಹಿತಳಾಗಿಲ್ಲ ಎಂದು ಸ್ನೇಹಿತರಿಗೆ ತಿಳಿಯುತ್ತದೆ. ಆ ನಂತರ ಪ್ರಿಯಾ ವರನ ಹುಡುಕಾಟ ಶುರುವಾಗಿದೆ. ಮರುತೊರ್ವಟ್ಟಂ ಗೀತಾಲಯದಲ್ಲಿ ರಾಧಾ ಮತ್ತು ದಿವಂಗತ ಪ್ರಭಾಕರನ್ ಅವರ ಪುತ್ರ ಅನಿಲ್ ಎಂಬವರನ್ನು ಸ್ನೇಹಿತರೇ ಕೊನೆಗೂ ಗುರುತಿಸಿ ವಿವಾಹಕ್ಕೆ ಮಾತುಕತೆ ನಡೆಸಿ ವ್ಯವಸ್ಥೆ ಕೈಗೊಂಡರು. ಪ್ರಿಯಾ ಮತ್ತು ಅನಿಲ್ ಚೇರ್ತಲ ವಾವಕ್ಕಾಡ್ ಮಹಾದೇವ ದೇವಸ್ಥಾನದಲ್ಲಿ ತಮ್ಮ ತಮ್ಮ ಕುಟುಂಬ ಹಾಗೂ ಅದೇ ಸಹಪಾಠಿಗಳ ಸಮ್ಮುಖದಲ್ಲಿ ನಿನ್ನೆ ವಿವಾಹಿತರಾದರು.
ಪ್ರಿಯಾ ಚೇರ್ತಲ ಕುರುಪ್ಪನಕುಳಂಗರ ನಿವಾರ್ತ್‍ನಲ್ಲಿ ಕಮಲಮ್ಮ ಮತ್ತು ದಿವಂಗತ ಪರಮೇಶ್ವರನ್ ದಂಪತಿಯ ಪುತ್ರಿ. ಗೆಳತಿ ಪ್ರಿಯಾಳ ಮದುವೆಯ ಆರಂಭದಿಂದ ಕೊನೆಯವರೆಗೂ ಕಟ್ಟಾ ಬೆಂಬಲಕ್ಕೆ ನಿಂತದ್ದು ಹಳೆಯ ವಿದ್ಯಾರ್ಥಿಗಳ ಸಂಘ. ಮದುವೆ, ಆರತಕ್ಷತೆ ಖರ್ಚು ಸೇರಿದಂತೆ ಸ್ನೇಹಿತರು ಜೊತೆಗಿದ್ದರು. ಸಾಜಿ, ಕುಂಞ ಕುಟ್ಟನ್ ಮತ್ತು ಪ್ರದೀಪ್ ತಂಡದ ನೇತೃತ್ವ ವಹಿಸಿದ್ದರು.
ಕ್ಲಾಸ್ ಮೇಟ್ಸ್: ಮೂರೂವರೆ ದಶಕಗಳ ನಂತರ ಹಳೆಯ ವಿದ್ಯಾರ್ಥಿಗಳ ಮಿಲನ: ಪ್ರಿಯಾಗೆ ಹೊಸ ಜೀವನ
0
ಏಪ್ರಿಲ್ 03, 2023