ಕುಂಬಳೆ : ಕಿದೂರು ಸಮೀಪದ ಕುಂಟಗೇರಡ್ಕ ಶ್ರೀಕುಪ್ಪೆ ಪಂಜುರ್ಲಿ ದೈವದ ಹಾಗೂ ಮೊಗೇರ ದೈವದ ಭಂಡಾರ ಕೊಟ್ಯ ಜೀರ್ಣೋದ್ಧಾರ ಕೆಲಸ ಕಾರ್ಯ ನಡೆದು ಮೇ.3ರಿಂದ 5ರ ವರೆಗೆ ಪುನರ್ ಪ್ರತಿಷ್ಠೆ,ಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವ ನಡೆಯಲಿದ್ದು ಇದರ ಆಮಂತ್ರಣಾ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಈ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆಯನ್ನು ಮಂಜುನಾಥ ಆಳ್ವ ಮಡ್ವ ವಹಿಸಿದ್ದರು. ಸಭೆಯಲ್ಲಿ ಚಂದ್ರ ಕಾಜೂರು, ಆನಂದ ರೈ ಕಾಜೂರು, ಸುಕೇಶ್ ಭಂಡಾರಿ, ಯೋಗೀಶ್ ಆಚಾರ್ಯ, ಶಿವರಾಮ ಶೆಟ್ಟಿ ಮಾಣಿಬೆಟ್ಟು, ಬಾಬು ಯು ಪಚ್ಲಂಪಾರೆ ಹಾಗೂ ವಾರ್ಡ್ ಸದಸ್ಯ ರವಿರಾಜ್ ಉಪಸ್ಥಿತರಿದ್ದರು.ಪುಂಡರೀಕಾಕ್ಷ ಕೆ.ಎಲ್.ಸ್ವಾಗತಿಸಿ, ವಸಂತ ಮಾಸ್ತರ್ ವಂದಿಸಿದರು. ಸಂಜೀವ ಮರಿಕ್ಕೆ ನಿರೂಪಿಸಿದರು.
ಮೇ 4ರಂದು ಬೆಳಗ್ಗೆ ಗಂಟೆ 7.45ರಿಂದ 8.30ರ ವೃಷಭ ಲಗ್ನ ಸುಮೂರ್ತದಲ್ಲಿ ದೈವಗಳ ಪುನರ್‍ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಹಾಪೂಜೆ ಜರಗಲಿದೆ. ಅಂದು ಮಧ್ಯಾಹ್ನ 1.30ಕ್ಕೆ ಶ್ರೀಗುಳಿಗ ದೈವದ ಕೋಲ, ಸಂಜೆ 3 ಕ್ಕೆ ಮೊಗೇರ ದೈವಗಳ ಕೋಲ, ಸಂಜೆ 6 ಕ್ಕೆ ಎಸ್ ಕೆ ಪಿ ಫ್ರೆಂಡ್ಸ್ ಕ್ಲಬ್ ಕುಂಟಗೇರಡ್ಕ ಕಿದೂರು ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಬಳಿಕ 7 ಕ್ಕೆ ಸಭಾಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಕ್ಕೆ ಶ್ರೀ ಕುಪ್ಪೆಪಂಜುರ್ಲಿ ಮತ್ತು ಕಲ್ಲುರ್ಟಿ ದೈವಗಳ ವರ್ಷಾವಧಿ ನೇಮ ಮೇ 5ರಂದು ಬೆಳಗ್ಗೆ 5 ಕ್ಕೆ ಅರಸಿನ ಹುಡಿ ಪ್ರಸಾದ ವಿತರಣೆ ಜರಗಲಿದೆ.
ಕಿದೂರು ಕುಂಟಗೇರಡ್ಕ ಕುಪ್ಪೆ ಪಂಜುರ್ಲಿ ದೈವದ ಭಂಡಾರಕೊಟ್ಯ ಪುನರ್ ಪ್ರತಿಷ್ಠಾ ನೇಮೋತ್ಸವದ ಆಮಂತ್ರಣಾ ಪತ್ರಿಕೆ ಬಿಡುಗಡೆ
0
ಏಪ್ರಿಲ್ 06, 2023
Tags