HEALTH TIPS

ಪಾಕ್: ಕಾಮಪಿಪಾಸುಗಳಿಂದ, ಅತ್ಯಾಚಾರದಿಂದ ಮಕ್ಕಳ ಶವವನ್ನು ರಕ್ಷಿಸಲು ಸಮಾಧಿಯ ಸುತ್ತ ಪೋಷಕರಿಂದ ಪ್ಯಾಡ್ ಲಾಕ್!

                 ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಕಾಮಾಂಧರು ಯುವತಿಯರ/ ಮಹಿಳೆಯರ ಶವವಗಳನ್ನೂ ಬಿಡುತ್ತಿಲ್ಲ.

                ನೆರೆ ರಾಷ್ಟ್ರದಲ್ಲಿ ನೆಕ್ರೋಫಿಲಿಯಾ (ಶವಗಳೊಂದಿಗೆ ಲೈಂಗಿಕ ಕ್ರಿಯೆ) ಪ್ರಕರಣಗಳು ಹೆಚ್ಚು ವರದಿಯಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ಶವಗಳನ್ನು ಅತ್ಯಾಚಾರದಿಂದ ರಕ್ಷಿಸುವುದಕ್ಕಾಗಿ ಸಮಾಧಿಯ ಸುತ್ತ ಪೋಷಕಕ್ರಿಂದ ಪ್ಯಾಡ್ ಲಾಕ್ ಹಾಕಿಸುತ್ತಿದ್ದಾರೆ. ಡೈಲಿ ಟೈಮ್ಸ್ ಈ ಬಗ್ಗೆ ವರದಿ ಪ್ರಕಟಿಸಿದ್ದು, ದೇಶದಲ್ಲಿ ಪ್ರತಿ ಎರಡು ಗಂಟೆಗೆ ಓರ್ವ ಮಹಿಳೆ ಮೇಲೆ ಅತ್ಯಾಚಾರ ನಡೆಯುತ್ತಿದೆ ಇದು ದೇಶವೇ ತಲೆ ತಗ್ಗಿಸುವ ವಿಷಯ ಎಂದು ಪತ್ರಿಕೆ ವರದಿ ಮಾಡಿದೆ. ಮಾಜಿ ಮುಸ್ಲಿಂ ನಾಸ್ತಿಕ ಕಾರ್ಯಕರ್ತ ಮತ್ತು "ದಿ ಕರ್ಸ್ ಆಫ್ ಗಾಡ್, ಏಕೆ ನಾನು ಇಸ್ಲಾಂ ಧರ್ಮವನ್ನು ತೊರೆದಿದ್ದೇನೆ" ಎಂಬ ಪುಸ್ತಕದ ಲೇಖಕರಾಗಿರುವ ಹ್ಯಾರಿಸ್ ಸುಲ್ತಾನ್ ಇಂತಹ ಕೆಟ್ಟ ಕೃತ್ಯಗಳಿಗೆ ಕಠಿಣ ಇಸ್ಲಾಮಿ ಸಿದ್ಧಾಂತವನ್ನು ದೂಷಿಸಿದ್ದಾರೆ. "ಪಾಕಿಸ್ತಾನವು ಅಂತಹ ಲೈಂಗಿಕವಾಗಿ ಪ್ರಚೋದನೆಗೊಂಡ, ಲೈಂಗಿಕವಾಗಿ ಹತಾಶಗೊಂಡ ಸಮಾಜವನ್ನು ಸೃಷ್ಟಿಸಿದೆ, ಜನರು ಈಗ ತಮ್ಮ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ.

               ನೀವು ಬುರ್ಖಾವನ್ನು ಅತ್ಯಾಚಾರದೊಂದಿಗೆ ಜೋಡಿಸಿದಾಗ ಅದು ನಿಮ್ಮನ್ನು ಸಮಾಧಿಗೆ ಹಿಂಬಾಲಿಸುತ್ತದೆ" ಎಂದು ಸುಲ್ತಾನ್ ಬುಧವಾರ ಟ್ವೀಟ್ ಮಾಡಿದ್ದಾರೆ.

                ಮತ್ತೋರ್ವ ಟ್ವಿಟರ್ ಬಳಕೆದಾರ ಸಾಜಿದ್ ಯೂಸಾಫ್ ಶಾ ಟ್ವೀಟ್ ಮಾಡಿದ್ದು, ಪಾಕಿಸ್ತಾನದಲ್ಲಿ ಕೆಲವರು ತಮ್ಮ ಮಗಳ ಸಮಾಧಿಯನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸಲು ಮುಂದಾಗುವಂತಹ ಸಾಮಾಜಿಕ ವಾತಾವರಣವನ್ನು ಸೃಷ್ಟಿಸಿದ್ದು, ಲೈಂಗಿಕವಾಗಿ ಆವೇಶದ ಮತ್ತು ದಮನಕ್ಕೊಳಗಾದ ಸಮಾಜವನ್ನು ಹುಟ್ಟುಹಾಕಿದೆ, ಅತ್ಯಾಚಾರ ಮತ್ತು ವ್ಯಕ್ತಿಯ ಉಡುಪುಗಳ ನಡುವಿನ ಸಂಬಂಧ ದುಃಖ ಮತ್ತು ಹತಾಶೆಯಿಂದ ತುಂಬಿದ ಹಾದಿಗೆ ಮಾತ್ರ ಕಾರಣವಾಗುತ್ತದೆ. ಪಾಕಿಸ್ತಾನದಲ್ಲಿ ಹಲವು ಸಂದರ್ಭಗಳಲ್ಲಿ ಮೃತ ಮಹಿಳೆಯರ ದೇಹಗಳನ್ನು ಸಮಾಧಿಗಳಿಂದ ಹೊರ ತೆಗೆಯಲಾಗಿದ್ದು, ಅತ್ಯಾಚಾರವೆಸಗಲಾಗಿದೆ ಎಂದು ಹೇಳಲಾಗುತ್ತದೆ. 2011 ರಲ್ಲಿ ಪಾಕಿಸ್ತಾನದಲ್ಲಿ ನೆಕ್ರೋಫಿಲಿಯಾ ಪ್ರಕರಣ ವರದಿಯಾಗಿದ್ದು, ಕರಾಚಿಯ ಉತ್ತರ ನಾಜಿಮಾಬಾದ್ನ ಮುಹಮ್ಮದ್ ರಿಜ್ವಾನ್ ಎಂಬ ಸಮಾಧಿಯನ್ನು ನೋಡಿಕೊಳ್ಳುವ ವ್ಯಕ್ತಿ, 48 ಸ್ತ್ರೀ ಶವಗಳ ಮೇಲೆ ಅತ್ಯಾಚಾರವೆಸಗಿರುವುದಾಗಿ ಒಪ್ಪಿಕೊಂಡಿದ್ದು, ಆತನನ್ನು ಬಂಧಿಸಲಾಗಿದೆ. ಅಲ್ಲಿನ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಪ್ರಕಾರ, ಶೇಕಡಾ 40 ಕ್ಕಿಂತ ಹೆಚ್ಚು ಪಾಕಿಸ್ತಾನಿ ಮಹಿಳೆಯರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೆಲವು ರೀತಿಯ ಹಿಂಸೆಯನ್ನು ಅನುಭವಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries