ನವದೆಹಲಿ: ಲಂಡನ್‌ನತ್ತ ಹಾರಾಟ ನಡೆಸಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಗದ್ದಲ ಸೃಷ್ಟಿಸಿದ ಪರಿಣಾಮ, ವಿಮಾನವು ಸೋಮವಾರ ದೆಹಲಿಗೆ ವಾಪಸ್ ಆಗಿದೆ.
ಮೂಲಗಳ ಪ್ರಕಾರ, 225 ಪ್ರಯಾಣಿಕರಿದ್ದ 'AI 111' ವಿಮಾನವು, ಪ್ರಯಾಣಿಕ ಗಲಾಟೆ ಮಾಡಿದ ಬಳಿಕ ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಐಜಿಐಎ) ವಿಮಾನಕ್ಕೆ ಹಿಂದಿರುಗಿತು ಎನ್ನಲಾಗಿದೆ.