ಫ್ರಾನ್ಸ್ ಸರಕಾರದ ಸಚಿವೆ 40 ವರ್ಷದ ಮರ್ಲಿನ್ ಶಿಯಪ್ಪ ಅವರು ಪ್ಲೇ ಬಾಯ್ ಎಂಬ
ಪುರುಷರ ಮ್ಯಾಗಜೀನ್ ನಲ್ಲಿ ಮುಖಪುಟದಲ್ಲಿ ಕಾಣಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಅವರ
ಈ ನಡೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗುತ್ತಿದ್ದು, ಆದರೂ ಕೂಡ ಮರ್ಲಿನ್ ಶಿಯಪ್ಪ
ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಮರ್ಲಿನ್ ಶಿಯಪ್ಪ ಅವರು ಸಾಮಾಜಿಕ ಆರ್ಥಿಕತೆ ಹಾಗೂ ಫ್ರೆಂಚ್ ಅಸೋಸಿಯೇಷನ್‌ನ
ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ಮಹಿಳಾ ಹಕ್ಕುಗಳಿಗಾಗಿ ಹೋರಾಡುತ್ತಿದ್ದ ಇವರ ನಡೆಗೆ
ಫ್ರಾನ್ಸ್‌ನ ಪ್ರಧಾನ ಮಂತ್ರಿ ಎಲಿಜಬೆತ್ ಬೋರ್ನೆ ಸೇರಿದಂತೆ ರಾಜಕಾರಣಿಗಳು
ಟೀಕಿಸಿದ್ದಾರೆ.
ಮಾಜಿ ಹಾಗೂ ಮೊದಲ ಲಿಂಗ ಸಮಾನತೆ ಸಚಿವರಾಗಿದ್ದ ಮರ್ಲಿನ್ ಶಿಯಪ್ಪ ಅವರು 2018
ರಲ್ಲಿ ಕ್ರಾಂತಿಕಾರಿ ಕಾನೂನು ಒಂದನ್ನು ಪರಿಚಯಿಸಿದ್ದರು. ಇದು ಮಹಿಳೆಯರಿಗೆ ರಕ್ಷಣೆ
ಒದಗಿಸುವುದಕ್ಕೆ ಸಂಬಂಧ ಪಟ್ಟಿತ್ತು. ಆದರೆ ಇತ್ತೀಚಿಗೆ ಇವರು ಪ್ಲೇ ಬಾಯ್
ಮ್ಯಾಗಜೀನ್‌ನ ಮುಖಪುಟದಲ್ಲಿ ಕಾಣಿಸಿಕೊಂಡಿದ್ದು ಎಲ್ಲರನ್ನೂ ಕೆರಳುವಂತೆ ಮಾಡಿದೆ.
ಮಹಿಳಾ ಹಕ್ಕುಗಳ ಬಗ್ಗೆ ಮಾತನಾಡುವವರೇ ಈ ರೀತಿ ಮಾಡುವುದು ಸರಿ ಅಲ್ಲ ಎಂದು ವಿರೋಧ
ಪಕ್ಷಗಳು ಕಿಡಿ ಕಾರುತ್ತಿದ್ದಾರೆ.
ಪ್ರಧಾನಿ ಎಲಿಜಬೆತ್ ಬೋರ್ನೆ ಮಾತನಾಡುತ್ತಾ ಮರ್ಲಿನ್ ಶಿಯಪ್ಪ ಅವರ ನಿರ್ಧಾರವು
ವಿಶೇಷವಾಗಿ ಈ ಅವಧಿಯಲ್ಲಿ ಸೂಕ್ತವಲ್ಲ," ಎಂದು ಬಿಎಫ್‌ಎಂಟಿವಿ ವರದಿ ಮಾಡಿದೆ.
ಇತ್ತೀಚಿಗಷ್ಟೇ ಫ್ರಾನ್ಸ್ ಸರ್ಕಾರ ನಿವೃತ್ತಿ ವಯಸ್ಸನ್ನು ಎರಡು ವರ್ಷಗಳ ಕಾಲ
ಹೆಚ್ಚಿಸಿತ್ತು. ಹೀಗಾಗಿ ಫ್ರಾನ್ಸ್‌ನ ತುಂಬೆಲ್ಲಾ ಪ್ರತಿಭಟನೆ ನಡೆಯುತ್ತಿದೆ. ಇಂತಹ
ಸಂದರ್ಭದಲ್ಲಿ ಸುಖಾ ಸುಮ್ಮನೇ ಶಿಯಪ್ಪಾ ಅವರು ವಿವಾದವನ್ನು ಮೈ ಮೇಲೆ ಎಳೆದುಕೊಂಡಿರೋದು
ವಿರೋಧ ಪಕ್ಷಗಳಿಗೆ ಮಾತನಾಡೋದಕ್ಕೆ ಅವಕಾಶ ಕೊಟ್ಟಂತಾಗಿದೆ.
ಇನ್ನೂ ಈ ಬಗ್ಗೆ ಟ್ವಿಟ್ ಮಾಡಿರೋ ಮರ್ಲಿನ್ ಶಿಯಪ್ಪ ತನ್ನ ನಡೆಯನ್ನು
ಸಮರ್ಥಿಸಿಕೊಂಡಿದ್ದಾರೆ. "ಎಲ್ಲಾ ಕಡೆ ಹಾಗೂ ಎಲ್ಲಾ ಸಮಯದಲ್ಲಿ ಮಹಿಳೆಯರು ತಮ್ಮ ದೇಹದ
ಮೇಲೆ ನಿಯಂತ್ರಣ ಹೊಂದುವ ಹಕ್ಕನ್ನು ರಕ್ಷಿಸುವಂತವರಾಗಿದ್ದಾರೆ". ಹಾಗೂ ಫ್ರಾನ್ಸ್‌ನ
ಮಹಿಳೆಯರು ಈ ವಿಚಾರದಲ್ಲಿ ಸ್ವತಂತ್ರರು ಎಂದು ಟ್ವಿಟ್ ಮಾಡಿದ್ದಾರೆ.
Invité ce matin sur Europe1 le Ministre de l’intérieur @GDarmanin apporte son soutien à @MarleneSchiappa sur sa Une Une de #playboy. Il cite Cookie Dingler : « vous ne me ferez pas dire de mal de Marlène Schiappa (…) être une femme libérée, c’est pas si facile »