ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಪ್ರಾಂಶುಪಾಲ ಯತೀಶ್ ಕುಮಾರ್ ರೈ, ಶಿಕ್ಷಕ ಕುಂಞÂ್ಞರಾಮ ಮಣಿಯಾಣಿ, ಮೋಹನನ್ ಒದಯೋತ್ ಹಾಗೂ ಶಿಕ್ಷಕಿ ಕಮಲಾ ಅವರನ್ನು ಬೀಳ್ಕೊಡಲಾಯಿತು.
ಶಾಲೆಯಲ್ಲಿ ಶುಕ್ರವಾರ ನಡೆದ ಬೀಳ್ಕೊಡುಗೆ ಸಮಾರಂಭವನ್ನು ಬೆಳ್ಳೂರು ಗ್ರಾ.ಪಂ.ಅಧ್ಯಕ್ಷ ಶ್ರೀಧರ ಎಂ.ಉದ್ಘಾಟಿಸಿದರು. ಡಾ.ಮೋಹನದಾಸ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಕರಾಗಿ ವೃತ್ತಿಯಿಂದ ನಿವೃತ್ತಿಯಾಗುವುದು ಇತರ ವೃತ್ತಿಯಂತಹ ನಿವೃತ್ತಿಯಂತಲ್ಲ. ಶಿಕ್ಷಕ ಸದಾ ಪ್ರವೃತ್ತನಾಗಿ ಶಿಷ್ಯಕೋಟಿಗಳ ಮೂಲಕ ವ್ಯಾಪಕನಾಗಿರುತ್ತಾನೆ ಎಂದು ತಿಳಿಸಿದರು.
ಮುಖ್ಯ ಶಿಕ್ಷಕಿ ವಾರಿಜಾ ಎಂ.ಸ್ವಾಗತಿಸಿದರು. ನವೀನ್ ಕುಮಾರ್ ವಂದಿಸಿದರು.