ಮುಳ್ಳೇರಿಯ: ಜಿಲ್ಲಾ ಪಂಚಾಯತಿ 2022-23ರ ವಾರ್ಷಿಕ ಯೋಜನೆಯಲ್ಲಿ ಸೇರ್ಪಡೆಗೊಂಡ ದೇಲಂಪಾಡಿ ಪಂಚಾಯತಿಯ ಮಿತ್ತೊಟ್ಟಿ-ಮುಂಡಲ್ಕಜೆ ಕಾಲುದಾರಿಯನ್ನು ಉದ್ಘಾಟಿಸಲಾಯಿತು.
ಪಾದಚಾರಿ ಮಾರ್ಗವನ್ನು ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಶಾನವಾಸ್ ಪಾದೂರು ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷೆ ನ್ಯಾಯವಾದಿ.ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ದೇಲಂಪಾಡಿ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಪ್ರಿಯಾ ಹರೀಶ್, ಸುರೇಂದ್ರನ್, ನಳಿನಾಕ್ಷಿ, ಪಂಚಾಯತಿ ಸದಸ್ಯರಾದ ಪ್ರಮೀಳಾ ಸಿ.ನಾಯ್ಕ್, ಟಿ.ಕೆ.ದಾಮೋದರನ್, ರಾಧಾಕೃಷ್ಣನ್, ದೇಲಂಪಾಡಿ ಪಂಚಾಯತಿ ಯೋಜನಾ ಸಮಿತಿ ಉಪಾಧ್ಯಕ್ಷ ಎ.ಚಂದ್ರಶೇಖರನ್ ಮಾತನಾಡಿದರು. ಪಂಚಾಯತಿ ಉಪಾಧ್ಯಕ್ಷ ಡಿ.ಎ.ಅಬ್ದುಲ್ಲ ಕುಂಞÂ ಸ್ವಾಗತಿಸಿ, ಎಸ್.ಟಿ ಪ್ರಮೋಟರ್ ಚಂದ್ರಶೇಖರ ವಂದಿಸಿದರು.
ದೇಲಂಪಾಡಿ ಮಿತ್ತೊಟ್ಟಿ-ಮುಂಡಲ್ಕಜೆ ಪಾದಚಾರಿ ರಸ್ತೆ ಉದ್ಘಾಟನೆ
0
ಏಪ್ರಿಲ್ 14, 2023
Tags