ಕಾಸರಗೋಡು: ಕಿಳಿಂಗಾರು ವಸಿಷ್ಠ ಪ್ರಶಸ್ತಿ ಪೀಠ ಟ್ರಸ್ಟ್ ನ ವಾರ್ಷಿಕೋತ್ಸವ ನೀರ್ಚಾಲು ಬಳಿಯ ಕಿಳಿಂಗಾರು ನಡುಮನೆಯಲ್ಲಿ ಜರುಗಿತು. ಸಮಾರಂಭ ಅಂಗವಾಗಿ ಶತರುದ್ರ ಯಾಗ, ದೇವಕಾರ್ಯ ಇತ್ಯಾದಿ ನಡೆಯಿತು. ಈ ಸಂದರ್ಭ ನಡೆದ ವಸಿಷ್ಠ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಮತ್ತು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ನೇಪಾಳ ಶ್ರೀ ಪಶುಪತಿನಾಥ ದೇವಸ್ಥಾನದ ಅರ್ಚಕ ರಾಮಕಾರಂತ ಮತ್ತು ಮೈಸೂರಿನ ನಿವೃತ್ತ ಪ್ರಾಚಾರ್ಯ ವಿದ್ವಾನ್ ಪಾರ್ಥ ನಾರಾಯಣ ಅವರಿಗೆ ವಸಿಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಡನೀರು ಮಠದ ಪ್ರಜ್ಞಾನಂ ವೇದ ರಕ್ಷಣಾ ಟ್ರಸ್ಟ್ ನ ಸುಬ್ರಹ್ಮಣ್ಯ ಹೆಗಡೆ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಅಧಿಕಾರಿ ಕೃಷ್ಣಯ್ಯ ಅವರ ಪತ್ನಿ ದೇವಕಿ ಅಮ್ಮ ಅವರ ಸ್ಮರಣಾರ್ಥ ಮತ್ತು ಪಳ್ಳತ್ತಡ್ಕ ಕೇಶವ ಭಟ್ ಸ್ಮರಣಾರ್ಥ ಚಿಕಿತ್ಸಾ ಸಹಾಯವನ್ನು ಅರ್ಹ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ನಿವೃತ್ತ ಬಿ.ಡಿ.ಎ. ಆಯುಕ್ತ ಡಾ.ಟಿ.ಶಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಐಲ ಹರಿನಾರಾಯಣ ಮಯ್ಯ ಮತ್ತು ಪರಕ್ಕಜೆ ಅನಂತ ನಾರಾಯಣ ಭಟ್ ಅಭಿನಂದನೆ ಭಾಷಣ ಮಾಡಿದರು. ಆದಿಚುಂಚನಗಿರಿಯ ಗೋವಿಂದ ಭಟ್, ಪಳ್ಳತ್ತಡ್ಕ ಪರಮೇಶ್ವರ ಭಟ್, ಮಂಜಳಗಿರಿ ವೆಂಕಟ್ರಮಣ ಭಟ್, ಜ್ಯೋತಿಷಿ ಬೇಳ ಪದ್ಮನಾಭ ಶರ್ಮ ಇರಿಞËಲಕ್ಕುಡ, ಮಂಗಳೂರಿನ ದತ್ತಂ ಆರ್ಯಧಾಮದ ಡಾ.ಅನಸೂಯಾ ದೇವಿ ಭಾರಧ್ವಾಜ್ ಉಪಸ್ಥಿತರಿದ್ದರು. ಕಿಳಿಂಗಾರು ಗೋಪಾಲಕೃಷ್ಣ ಭಟ್ ಸ್ವಾಗತಿಸಿದರು. ವಿ.ಬಿ.ಹಿರಣ್ಯ ಪ್ರಾಸ್ತಾವಿಕ ಭಾಷಣ ಮಾಡಿದರು. ಪತ್ರಕರ್ತ ವೀಜಿ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ಪತ್ತಡ್ಕ ಗಣಪತಿ ಭಟ್ ವಂದಿಸಿದರು.
ವಸಿಷ್ಠ ಪ್ರಶಸ್ತಿ ಪೀಠದ ವಾರ್ಷಿಕೋತ್ಸವ, ಪ್ರಶಸ್ತಿಪ್ರದಾನ ಸಮಾರಂಭ
0
ಏಪ್ರಿಲ್ 22, 2023