ಬದಿಯಡ್ಕ: ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಏ. 28 ರಂದು ಶುಕ್ರವಾರ ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಊರಿನ ಸಮಸ್ತಭಕ್ತರ ಕೂಡುವಿಕೆಯಿಂದ ಬಲಿವಾಡು ಕೂಟ, ಲೋಕಕಲ್ಯಾಣಾರ್ಥ ಹಾಗೂ ಮಳೆಗಾಗಿ ಸಾಮೂಹಿಕ ವಿಶೇಷ ಪ್ರಾರ್ಥನೆ ಸಲ್ಲಿಕೆ ನಡೆಯಲಿದೆ.
ಜೊತೆಗೆ ಪ್ರತಿ ತಿಂಗಳು ಆಯೋಜಿಸುವ ಗಣಪತಿ ಹವನ ಹಾಗೂ ರಾತ್ರಿ ದುರ್ಗಾ ಪೂಜೆ ಜರಗಲಿರುವುದು. ಭಗವದ್ಭಕ್ತರು ದೇವತಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿ ಸಂಬಂಧಪಟ್ಟವರು ವಿನಂತಿಸಿದ್ದಾರೆ.