ಕಾಸರಗೋಡು: ಎಡರಂಗ ಸರ್ಕಾರದ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ಮೈ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳವು ಮೇ 3 ರಿಂದ 9 ರವರೆಗೆ ಕಾಞಂಗಾಡ್‍ನ ಅಲಮಿಪಲ್ಲಿಯಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಪ್ರಚಾರಾರ್ಥ ಜಿಲ್ಲಾ ಮಾಹಿತಿ ಕಛೇರಿ, ತ್ರಿಕರಿಪುರ ಇಂಜಿನಿಯರಿಂಗ್ ಕಾಲೇಜಿನ ಎನ್‍ಎಸ್‍ಎಸ್ ಘಟಕ ಮತ್ತು ಕಾಞಂಗಾಡಿನ ಜಿಲ್ಲಾ ಆಸ್ಪತ್ರೆ ಸಹಯೋಗದೊಂದಿಗೆ ವಿದ್ಯಾರ್ಥಿಗಳಿಗೆ ರಕ್ತದಾನ ಶಿಬಿರವನ್ನು ನಡೆಸಲಾಯಿತು.
ಕಯ್ಯೂರು-ಚಿಮೇನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಪಿ.ವತ್ಸಲನ್ ಶಿಬಿರ ಉದ್ಘಾಟಿಸಿದರು. ಕಾಲೇಜು ಪ್ರಾಂಶುಪಾಲ ಡಾ.ವಿನೋದ್ ಪೆÇಟ್ಟಕುಳತ್ ಅಧ್ಯಕ್ಷತೆ ವಹಿಸಿದ್ದರು. ಯೂನಿಯನ್ ಅಧ್ಯಕ್ಷ ಅನಂತು ಹಾಗೂ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ನಿಮಿ ಜಾನ್ ಮಾತನಾಡಿದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಪಿ. ಬಿನೇಶ್ ಮೋಹನ್ ಸ್ವಾಗತಿಸಿದರು. ಮಾಹಿತಿ ಇಲಾಖೆ ಸಹಾಯಕ ಅರುಣ್ ಸೆಬಾಸ್ಟಿಯನ್ ವಂದಿಸಿದರು. ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ನಿಮಿಜಾನ್ ನೇತೃತ್ವದ ವೈದ್ಯಕೀಯ ತಂಡದ ನೇತೃತ್ವದಲ್ಲಿ ರಕ್ತದಾನ ನಡೆಯಿತು. 56 ಮಂದಿ ವಿದ್ಯಾರ್ಥಿಗಳು ರಕ್ತದಾನದಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ಎರಡನೇ ವಾರ್ಷಿಕೋತ್ಸವ-ರಕ್ತದಾನ ಶಿಬಿರ
0
ಏಪ್ರಿಲ್ 14, 2023
Tags