ಸೋಮನಾಥ (PTI): ಭಾರತವು 2047ರೊಳಗೆ ಅಭಿವೃದ್ಧಿಹೊಂದಿದ ರಾಷ್ಟ್ರವಾಗುವ ಗುರಿ ಸಾಧನೆಯ ಹಾದಿಯಲ್ಲಿ ಎದುರಾಗುವ ಅಡೆತಡೆಗಳನ್ನು ಮೀರಲಿದೆ. ಜತೆಗೆ ಅತ್ಯಂತ ಕಷ್ಟದ ಸಂದರ್ಭಗಳಲ್ಲೂ ಏನಾದರೊಂದು ಹೊಸತನ್ನು ಮಾಡುವ ಧೈರ್ಯಶಾಲಿ ರಾಷ್ಟ್ರ ಎನಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಬಣ್ಣಿಸಿದರು.

'ಸೌರಾಷ್ಟ್ರ ತಮಿಳು ಸಂಗಮಂ' ಸಮಾರೋಪ ಉದ್ದೇಶಿಸಿ ವರ್ಚುವಲ್ ಮೂಲಕ ಮಾತನಾಡಿದ ಅವರು, ಭಾರತವು ತನ್ನ ವೈವಿಧ್ಯತೆಯನ್ನು ಆಚರಿಸುವ ರಾಷ್ಟ್ರವಾಗಿದೆಯೇ ಹೊರತು ವಿಭಜನೆಯನ್ನಲ್ಲ. ಈ ವೈವಿಧ್ಯವು ನಮ್ಮ ಬಾಂಧವ್ಯ ಮತ್ತು ಸಂಬಂಧಗಳನ್ನು ಬಲಪಡಿಸುತ್ತದೆ ಎಂದು ಪ್ರತಿಪಾದಿಸಿದರು.
' ಗುಲಾಮಗಿರಿಯ ಯುಗ ಮತ್ತು ಅದರ ನಂತರದ ಏಳು ದಶಕಗಳ ನಂತರವೂ ಅಭಿವೃದ್ಧಿ ಸಾಧಿಸುವ ಹಾದಿಯಲ್ಲಿ ಸವಾಲುಗಳು ನಮ್ಮ ಮುಂದಿವೆ. ನಾವು ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕು. ಈ ಹಾದಿಯಲ್ಲಿ ನಮ್ಮನ್ನು ತಡೆಯುವ, ಬೆದರಿಸುವ ಶಕ್ತಿಗಳು ಮತ್ತು ದಾರಿ ತಪ್ಪಿಸುವ ಜನರು ಇರುತ್ತಾರೆ. ಆದರೆ, ಅತ್ಯಂತ ಕಠಿಣ ಪರಿಸ್ಥಿತಿಯಲ್ಲೂ ಹೊಸದನ್ನು ಮಾಡುವ ಧೈರ್ಯ ಭಾರತಕ್ಕಿದೆ' ಎಂದು ಮೋದಿ ಹೇಳಿದರು.
'ಸೌರಾಷ್ಟ್ರ ತಮಿಳು ಸಂಗಮಂ' ಆಚರಣೆಯು ಗುಜರಾತ್ ಮತ್ತು ತಮಿಳುನಾಡು ನಡುವೆ ಸಂಸ್ಕೃತಿ ಮತ್ತು ಪರಂಪರೆಯ ವಿನಿಮಯದ ಜತೆಗೆ ಪ್ರಧಾನಮಂತ್ರಿಯವರ ಪರಿಕಲ್ಪನೆಯ 'ಏಕ್ ಭಾರತ್ ಶ್ರೇಷ್ಠ ಭಾರತ್' ಅನ್ನು ಮುನ್ನಡೆಸುತ್ತದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.