ಕಾಸರಗೋಡು: ಕೇಂದ್ರ ಸರ್ಕಾರ ಇತ್ತೀಚೆಗೆ ಕೇರಳಕ್ಕೆ ಮಂಜೂರುಗೊಳಿಸಿರುವ ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸಬೇಕು ಎಂದು ಕಾಸರಗೋಡು ಜನಾಭಿವದ್ಧಿ ಸಮಿತಿ ಆಗ್ರಹಿಸಿದೆ.
ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಕಾಸರಗೋಡು ಜಿಲ್ಲೆಯ ಜನತೆ ಉನ್ನತ, ವಿದ್ಯಾಭ್ಯಾಸ, ಉದ್ಯೋಗಕ್ಕಾಗಿ ಇತರ ರಾಜ್ಯ ಯಾ ಜಿಲ್ಲೆಗಳನ್ನು ಆಶ್ರಯಿಸುತ್ತಿದ್ದಾರೆ. ರೈಲು ಪ್ರಯಾಣದ ಸೌಲಭ್ಯಗಳ ಮಿತಿಯನ್ನು ಪರಿಗಣಿಸಿ ಕೋಝಿಕ್ಕೋಡ್‍ನಲ್ಲಿ ಕೊನೆಗೊಳ್ಳುವ ವಂದೇ ಭಾರತ್ ರೈಲನ್ನು ಮಂಗಳೂರಿಗೆ ವಿಸ್ತರಿಸುವ ಬೇಡಿಕೆಯನ್ನು ಕೇಂದ್ರ ಸರ್ಕಾರವು ಸಹಾನುಭೂತಿಯಿಂದ ಪರಿಗಣಿಸಬೇಕು ಎಂದು ಸಭೆ ಒತ್ತಾಯಿಸಿದೆ.
ಜನಾಭಿವದ್ಧಿ ಸಮಿತಿ ಅಧ್ಯಕ್ಷ ಹಾಗೂ ಕಾಸರಗೋಡು ನಗರಸಭಾ ಸದಸ್ಯ ಪಿ.ರಮೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆ.ಆರ್.ಹರೀಶ್, ಕೆ.ದಿನೇಶ್, ಕೆ.ಶಂಕರನ್, ಎ.ಟಿ.ನಾಯಕ್, ಕಮಲೇಶ್, ಸೂರಜಶೆಟ್ಟಿ ಉಪಸ್ಥಿತರಿದ್ದರು.