ಪೆರ್ಲ: ಮೈಸೂರು ಅಸೋಸಿಯೇಶನ್ ಮುಂಬೈ ನೇತೃತ್ವದಲ್ಲಿ ಏರ್ಪಡಿಸಿದ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ರಾಜಶ್ರೀ ಟಿ.ರೈ ಪೆರ್ಲ ತೃತೀಯ ಬಹುಮಾನಕ್ಕೆ ಭಾಜನರಾಗಿದ್ದಾರೆ. ಇವರು ರಚಿಸಿದ ‘ಚೇಕತ್ತಿ’ ನಾಟಕ ತೃತೀಯ ಬಹುಮಾನ ಗಳಿಸಿಕೊಂಡಿದ್ದು ಗಡಿನಾಡಿನ ನಾಟಕ ಸಾಹಿತ್ಯಕ್ಕೆ ಸಂದ ಗೌರವ ಇದಾಗಿದೆ.
ಖ್ಯಾತ ತೀರ್ಪುಗಾರರಾದ ಅಹಲ್ಯ ಬಲ್ಲಾಳ್ ಮುಂಬೈ ಹಾಗೂ ಶ್ರೀನಿವಾಸ ಪ್ರಭು ಬೆಂಗಳೂರು ನಾಟಕ ಆಯ್ಕೆಗೆ ಸಹಕರಿಸಿದ್ದರು.
ಬೆಂಗಳೂರಿನ ಡಾ.ರಘನಂದನ್ ಬೇಲೂರು ಅವರ ಶರ್ಮಿಷ್ಠೆ (ಪ್ರಥಮ),ಧಾರವಾಡದ ವಿನುತ ಹಂಚಿಮನಿ ಅವರ ಪರಿತ್ಯಕ್ತೆ,(ದ್ವಿತಿಯ), ಅಭಿಲಾಷ ಉಡುಪಿ ಅವರ ಭೀμÁ್ಮವಲೋಕನ ನಾಟಕ ಹಾಗೂ ರಾಜಶ್ರೀ ರೈ ಅವರ ಚೇಕತ್ತಿ ನಾಟಕ, (ತೃತೀಯ) ಬಹುಮಾನವನ್ನು ಸಮಾನವಾಗಿ ಹಂಚಿಕೊಂಡಿದೆ.
ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯಲ್ಲಿ ಪೆರ್ಲದ ರಾಜಶ್ರೀ ಟಿ.ರೈಯ "ಚೇಕತ್ತಿ"ಗೆ ತೃತೀಯ ಬಹುಮಾನ
0
ಏಪ್ರಿಲ್ 01, 2023