ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆ: ಪ್ರಾಂಶುಪಾಲ ಹುದ್ದೆಗೆ ಅರ್ಜಿ ಆಹ್ವಾನ
0
ಏಪ್ರಿಲ್ 20, 2023
ಕಾಸರಗೋಡು: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯ ರಾಜ್ಯ ಪರಿಶಿಷ್ಟ ಜಾತಿ ವಸತಿ ಶಿಕ್ಷಣ ಸಂಸ್ಥೆಯ ನಿಯಂತ್ರಣದಲ್ಲಿರುವ ಕರಿಂದಲಂ ಏಕಲವ್ಯ ಮಾದರಿ ವಸತಿ ಕ್ರೀಡಾ ಶಾಲೆಯಲ್ಲಿ 2023-23ನೇ ಶೈಕ್ಷಣಿಕ ವರ್ಷಕ್ಕೆ ಗುತ್ತಿಗೆ ಆಧಾರದ ಮೇಲೆ ಪ್ರಾಂಶುಪಾಲರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಪರಪ್ಪ ಗಿರಿಜನ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಬೇಕಾಗಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 50% ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಮತ್ತು ಬೋಧನಾಪದವಿ (ಬಿಇಡಿ) ಶೈಕ್ಷಣಿಕ ಅರ್ಹತೆಯಾಗಿದೆ. ಸಿಬಿಎಸ್‍ಇ ಸಂಯೋಜಿತ ಹಿರಿಯ ಮಾಧ್ಯಮಿಕ ಶಾಲೆ ಅಥವಾ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳನ್ನು ನಡೆಸುವ ಸಂಸ್ಥೆಗಳಲ್ಲಿ ಕನಿಷ್ಠ ಮೂರು ವರ್ಷಗಳ ಕೆಲಸದ ಅನುಭವ ಹೊಂದಿರಬೇಕಾಗಿದ್ದು, 35 ರಿಂದ 58 ವರ್ಷಗಳ ನಡುವಿನ ವಯೋಮಿತಿಯವರು ಅರ್ಹತೆ ಹೊಂದಿರುತ್ತಾರೆ. ಕಂಪ್ಯೂಟರ್ ಜ್ಞಾನಕ್ಕೆ ಆದ್ಯತೆ ಕಲ್ಪಿಸಲಾಗಿದ್ದು, ಮಾಸಿಕ 45800 ವೇತನ ನಿಗದಿಪಡಿಸಲಾಗಿದೆ. ಸಂಸ್ಥೆಯಲ್ಲಿ ವಾಸ್ತವ್ಯವುದ್ದು ಕೆಲಸ ಮಾಡಲು ಒಪ್ಪಿಗೆಯುಳ್ಳವರು ಮಾತ್ರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 5 ಆಗಿದ್ದು, ಗಿರಿಜನ ಅಭಿವೃದ್ಧಿ ಅಧಿಕಾರಿ, ಫೆಡರಲ್ ಬ್ಯಾಂಕ್ ಕಟ್ಟಡ, 2 ನೇ ಮಹಡಿ, ಮುಖ್ಯ ರಸ್ತೆ, ಪರಪ್ಪ, ಅಂಚೆ ಪರಪ್ಪ-671533 ಎಂಬ ವಇಳಾಸಕ್ಕೆ ಅರ್ಜಿ ಸಲ್ಲಿಸಬೇಕು. ಈ ಬಗ್ಗೆ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0467 2960111)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.