ತಿರುವನಂತಪುರಂ: ಸುದೀರ್ಘ ಕಾಯುವಿಕೆಯ ನಂತರ ಕೇರಳಕ್ಕೆ ವಂದೇ ಭಾರತ್ ಎಕ್ಸ್ ಪ್ರೆಸ್ ಮಂಜೂರಾಗಿದೆ.
ನಿನ್ನೆಯಷ್ಟೇ ರಾಜ್ಯಕ್ಕೆ ಮಂಜೂರಾಗಿದ್ದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ದಕ್ಷಿಣ ರೈಲ್ವೆ ಸ್ವೀಕರಿಸಿದೆ. ಏಪ್ರಿಲ್ 25 ರಂದು ಪ್ರಧಾನಿಯವರು ರೈಲಿನಲ್ಲಿ ಸಂಜೆ ತಿರುವನಂತಪುರಕ್ಕೆ ಆಗಮಿಸಲಿದ್ದಾರೆ. ಬಳಿಕ ಧ್ವಜಾರೋಹಣ ನಡೆಯಲಿದೆ ಎಂದು ವರದಿಯಾಗಿದೆ.
ಈ ರೈಲು ತಿರುವನಂತಪುರದಿಂದ ಏಳರಿಂದ ಏಳೂವರೆ ಗಂಟೆಗಳಲ್ಲಿ ಕಣ್ಣೂರು ತಲುಪಲಿದೆ. ಬೆಳಗ್ಗೆ 5 ಗಂಟೆಗೆ ತಿರುವನಂತಪುರಂನಿಂದ ವಂದೇಭಾರತ ಸೇವೆ ಆರಂಭವಾಗಲಿದೆ. ಕೇರಳದಲ್ಲಿ ಎಂಟು ನಿಲ್ದಾಣಗಳಿರುತ್ತವೆ. ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಳಂ ಟೌನ್, ತ್ರಿಶೂರ್, ತಿರೂರ್, ಕೋಝಿಕ್ಕೋಡ್ ಮತ್ತು ಕಣ್ಣೂರುಗಳಲ್ಲಿ ನಿಲುಗಡೆಯಾಗಲಿದೆ. ಕೇರಳದಲ್ಲಿ 16 ಬೋಗಿಗಳ ರೈಲು ಕಾರ್ಯನಿರ್ವಹಿಸಲಿದೆ.
ವಂದೇಭಾರತದ ಗರಿಷ್ಠ ವೇಗ ಗಂಟೆಗೆ 160 ಕಿಮೀ. ಆದರೆ ಕೇರಳದಲ್ಲಿ ಗರಿಷ್ಠ ವೇಗ ಗಂಟೆಗೆ 100 ಕಿ.ಮೀ.ಇರಲಿದೆ. ಸಂಪೂರ್ಣವಾಗಿ ಹವಾನಿಯಂತ್ರಿತವಾಗಿರುವ ವಂದೇಭಾರತದಲ್ಲಿ ಎರಡು ವರ್ಗಗಳಿವೆ. ಚೇರ್ ಕಾರ್ ಮತ್ತು ಎಕ್ಸಿಕ್ಯೂಟಿವ್ ಕೋಚ್. ಕಾರ್ಯನಿರ್ವಾಹಕ ಕೋಚ್ ರಿವಾಲ್ವಿಂಗ್ ಚೇರ್ ಸೇರಿದಂತೆ ವ್ಯವಸ್ಥೆಗಳನ್ನು ಹೊಂದಿರುತ್ತದೆ. ಸ್ವಯಂಚಾಲಿತ ಬಾಗಿಲುಗಳು, ಕೋಚ್‍ಗಳಲ್ಲಿ ವೈ-ಫೈ, ಜಿಪಿಎಸ್ ಮತ್ತು ಜೈವಿಕ ನಿರ್ವಾತ ಶೌಚಾಲಯಗಳು ವಂದೇ ಭಾರತ್ ಎಕ್ಸ್‍ಪ್ರೆಸ್‍ನ ವೈಶಿಷ್ಟ್ಯಗಳಾಗಿವೆ.
ಆದರೆ ಈ ರೈಲು ಕಣ್ಣೂರಿನಿಂದ ಈಚೆ ಕಾಸರಗೋಡು-ಮಂಗಳೂರಿಗೆ ವಿಸ್ತರಣೆಯಾಗದಿರುವುದು ಬೇಸರ ತರಿಸಿದ್ದು, ಈ ನಿಟ್ಟಿನ ಪ್ರಯತ್ನಗಳು ಸಾಗಿವೆ.
ಏಳು ಗಂಟೆಗಳಲ್ಲಿ ತಿರುವನಂತಪುರದಿಂದ ಕಣ್ಣೂರಿಗೆ: ಕೇರಳದಲ್ಲಿ ವಂದೇಭಾರತಕ್ಕೆ ಎಂಟು ನಿಲ್ದಾಣಗಳು: ಮಂಗಳೂರಿಗೂ ವಿಸ್ತರಿಸಲು ಒತ್ತಾಯ
0
ಏಪ್ರಿಲ್ 14, 2023