ಕಣ್ಣೂರು: ಕಣ್ಣೂರಿನ ಕೈದಪ್ರಂ ಗ್ರಾಮದಲ್ಲಿ ಸೋಮಯಾಗ ಆಯೋಜಿಸಲಾಗಿದೆ. ಸೋಮ ಯಾಗ ನಾಳೆಯಿಂದ(ಏಪ್ರಿಲ್ 29) ಮೇ 5 ರವರೆಗೆ ನಡೆಯಲಿದೆ. 50ಕ್ಕೂ ಹೆಚ್ಚು ವೈದಿಕರು ಯಾಗದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ.
ಕಾಲಡಿ ವಿಶ್ವವಿದ್ಯಾನಿಲಯ ಪಯ್ಯನ್ನೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ವಿಷ್ಣು ಕೊಂಬಂಗ್ಕುಲಂ ಮತ್ತು ಪತ್ನಿ ಉಷಾ ಅಗ್ನಿಹೋತ್ರಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಯಾಗದ ನಿಮಿತ್ತ ಪ್ರತಿದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಕೇರಳದ ಒಳಗಿನ ಮತ್ತು ಹೊರಗಿನ ಅನೇಕ ವೈದಿಕ ವಿದ್ವಾಂಸರು, ರಾಜಕೀಯ ಮುಖಂಡರು, ಚಲನಚಿತ್ರ ತಾರೆಯರು, ಕಲೆ ಮತ್ತು ಸಾಹಿತ್ಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಹೊಸನಗರ ರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಶ್ರೀಗಳು ರಕ್ಷಾಧಿಕಾರಿಗಳಾಗಿರುವರು.
ಮೊದಲ ದಿನದ ಸಾಂಸ್ಕøತಿಕ ಕಾರ್ಯಕ್ರಮವನ್ನು ಮಾಜಿ ಸಂಸದ ಸುರೇಶ್ ಗೋಪಿ ಭದ್ರದೂಪ ಬೆಳಗಿಸುವ ಮೂಲಕ ಉದ್ಘಾಟಿಸುವರು. ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಉದ್ಘಾಟಿಸುವರು.