HEALTH TIPS

ಬಿಸಿಯೂಟಕ್ಕೆ ಬೇಳೆಗಳನ್ನು ನಫೆಡ್ ನಿಂದ ಖರೀದಿಸಲು ರಾಜ್ಯಗಳಿಗೆ ಕೇಂದ್ರದ ಸೂಚನೆ

                  ವದೆಹಲಿ: ಸಮಗ್ರ ಪೌಷ್ಟಿಕತೆಗಾಗಿ ಪ್ರಧಾನ ಮಂತ್ರಿಗಳ ಯೋಜನೆ (ಪೋಷಣ್)ಗಾಗಿ ಬೇಳೆಗಳನ್ನು ನಫೆಡ್ ನಿಂದ (ರಾಷ್ಟ್ರೀಯ ಕೃಷಿ ಸಹಕಾರಿ ಮಾರಾಟ ಒಕ್ಕೂಟ/Nafed) ಖರೀದಿಸುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯ ಸರಕಾರಗಳಿಗೆ ಪತ್ರವನ್ನು ಬರೆದಿದೆ.

                   ಪಶ್ಚಿಮ ಬಂಗಾಳ ಮತ್ತು ಬಿಜೆಪಿ ಸೇರಿದಂತೆ ಕನಿಷ್ಠ ಮೂರು NDA ಆಡಳಿತದ ರಾಜ್ಯಗಳು ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರೆ, ಪಂಜಾಬ್ ಈ ಬಗ್ಗೆ ಸ್ಪಷ್ಟನೆಯನ್ನು ಕೇಳಿದೆ ಎಂದು indianexpress.com ವರದಿಯಾಗಿದೆ.

                     ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಪ್ರಾಚಿ ಪಾಂಡೆ ಅವರು ಮಾ.28ರಂದು ಬರೆದಿರುವ ಪತ್ರದಲ್ಲಿ,ಭಾರತ ಸರಕಾರದ ಬಳಿ ದಾಸ್ತಾನಿರುವ ಬೇಳೆಗಳನ್ನು ನಫೆಡ್ ಮೂಲಕ ಖರೀದಿಸಬಹುದು ಎಂದು ತಿಳಿಸಲಾಗಿದೆ. ವಿದ್ಯಾರ್ಥಿಗಳ ಹಿತಾಸಕ್ತಿಯಲ್ಲಿ ಸಬ್ಸಿಡಿ ದರಗಳಲ್ಲಿ ಬೇಳೆಗಳನ್ನು ಪೂರೈಸುವುದಾಗಿ ಭರವಸೆಯನ್ನು ನೀಡಲಾಗಿದೆ. ತಮಗೆ ಅಗತ್ಯವಿರುವ ಕಡಲೆ ಬೇಳೆಯ ಪ್ರಮಾಣವನ್ನು ಎ.3ರೊಳಗೆ ತಿಳಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕೋರಲಾಗಿದೆ.

                     2022, ಡಿ.21ರಂದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹೊರಡಿಸಲಾಗಿದ್ದ ವಿವರವಾದ ಮಾರ್ಗಸೂಚಿಗಳಲ್ಲಿ ನಫೆಡ್ ನಿಂದ ಬೇಳೆಗಳ ಖರೀದಿ ಕುರಿತು ಉಲ್ಲೇಖಿಸಿಲ್ಲ. ಈ ಮಾರ್ಗಸೂಚಿಗಳು 2019, ಫೆ.28ರಂದು ಬರೆಯಲಾಗಿದ್ದ ಪತ್ರದ ಅನುಸರಣೆಯಾಗಿದ್ದು,ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮಧ್ಯಾಹ್ನದೂಟಕ್ಕಾಗಿ ಸ್ಥಳೀಯ ರುಚಿಗನುಗುಣವಾಗಿ ಬೇಳೆಗಳನ್ನು ಕೇಂದ್ರ ಮೀಸಲು ದಾಸ್ತಾನಿನಿಂದ ಪಡೆದುಕೊಳ್ಳಬಹುದಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು.

                   ಕೇಂದ್ರ ಶಿಕ್ಷಣ ಸಚಿವಾಲಯದ ಇತ್ತೀಚಿನ ಪತ್ರಕ್ಕೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಶಿಕ್ಷಣ ಸಚಿವ ಬೃತ್ಯ ಬಸು ಅವರು,'ಕೋವಿಡ್ ಸಂದರ್ಭದಲ್ಲಿ ನಫೆಡ್ನಿಂದ ಪೂರೈಕೆಯಾಗಿದ್ದ ಕಡಲೆ ಬೇಳೆ ಅತ್ಯಂತ ಕಳಪೆ ಗುಣಮಟ್ಟದ್ದಾಗಿತ್ತು, ಧೂಳು ಮತ್ತು ಜಲ್ಲಿ ಮಿಶ್ರಿತವಾಗಿತ್ತು. ಮಕ್ಕಳ ಪೋಷಕರು ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಅಲ್ಲದೆ ರಾಜ್ಯದಲ್ಲಿ ಕಡಲೆ ಬೇಳೆ ಸಾಮಾನ್ಯ ಆಹಾರ ಪದ್ಧತಿಯಲ್ಲ. ಇಲ್ಲಿ ಮಧ್ಯಾಹ್ನದೂಟಕ್ಕೆ ಮಸೂರ್ ದಾಲ್ ಬಳಸಲಾಗುತ್ತದೆ. ಹೀಗಾಗಿ ನಮಗೆ ಕಡಲೆ ಬೇಳೆಯ ಅಗತ್ಯವಿಲ್ಲ ಎಂದು ನಿರ್ಧರಿಸಲಾಗಿದೆ' ಎಂದು ಹೇಳಿದ್ದಾರೆ.

                    ಈಶಾನ್ಯ ಭಾರತದಲ್ಲಿಯ NDA ಆಡಳಿತದ ಕನಿಷ್ಠ ಎರಡು ರಾಜ್ಯಗಳು ಕೇಂದ್ರದ ಪ್ರಸ್ತಾವವನ್ನು ತಿರಸ್ಕರಿಸಿವೆ ಎಂದು ಬಲ್ಲ ಮೂಲಗಳು ತಿಳಿಸಿವೆ.

                'ನಮ್ಮ ಗ್ರಾಮಗಳಲ್ಲಿ ಬೇಳೆಗಳ ಖರೀದಿಗೆ ಯಾವುದೇ ಸಮಸ್ಯೆಯಿಲ್ಲ. ನಾವು ಖರೀದಿಯ ಗುಣಮಟ್ಟದ ಮೇಲೆ ನಿಗಾಯಿರಿಸಿದ್ದೇವೆ,ಇಲ್ಲಿ ಯಥೇಚ್ಛ ಪೂರೈಕೆಯಿದೆ. ಹೀಗಾಗಿ ಕೇಂದ್ರದ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅಗತ್ಯ ನಮಗಿಲ್ಲ ' ಎಂದು ಉ.ಪ್ರದೇಶ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.

              'ಪ್ರಸಕ್ತ ಪಂಜಾಬ ರಾಜ್ಯ ನಾಗರಿಕ ಸರಬರಾಜು ನಿಗಮ (ಪುನ್ಸಪ್)ವು ನಮ್ಮ ಶಾಲೆಗಳಿಗೆ ಗೋದಿ ಮತ್ತು ಅಕ್ಕಿಯನ್ನು ಪೂರೈಸುತ್ತಿದೆ ಮತ್ತು ನಾವು ಅದಕ್ಕೆ ಸಾರಿಗೆ ವೆಚ್ಚವನ್ನು ಪಾವತಿಸುತ್ತಿದ್ದೇವೆ. ನಫೆಡ್ ನಮ್ಮ ಶಾಲೆಗಳಿಗೆ ಬೇಳೆಗಳನ್ನು ಹೇಗೆ ಪೂರೈಸುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ,ಹೀಗಾಗಿ ನಾವು ಸ್ಪಷ್ಟನೆಯನ್ನು ಕೋರಿದ್ದೇವೆ 'ಎಂದು ಪಂಜಾಬಿನಲ್ಲಿ ಪೋಷಣ್ನ ಜನರಲ್ ಮ್ಯಾನೇಜರ್ ವರಿಂದರ್ ಸಿಂಗ್ ಬ್ರಾರ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries