ಕಾಸರಗೋಡು: ರಾಜಕೀಯ ವಲಯದಲ್ಲಿ ಎದುರಾಗುತ್ತಿರುವ ಸಂದಿಗ್ಧತೆಗಳನ್ನು ಮೀರಿ ನಿಲ್ಲುವ ನಿಟ್ಟಿನಲ್ಲಿ ಹೆಚ್ಚಿನ ಜವಾಬ್ಧಾರಿ ನಿಭಾಯಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಸಿಪಿಐ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಕಾನಂ ರಾಜೇಂದ್ರನ್ ತಿಳಿಸಿದ್ದಾರೆ.
ಅವರು ಸಿಪಿಐ ಜಿಲ್ಲಾ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬದಲಾಗುತ್ತಿರುವ ಸನ್ನಿವೇಶಗಳನ್ನು ಮುಂದಿಟ್ಟುಕೊಂಡು ಈಗಿಂದಲೇ ಜನರೆಡೆಗೆ ಸಂಪರ್ಕ ಏರ್ಪಡಿಸುವಂತೆ ಸಲಹೆ ನೀಡಿದರು. ಸಿ.ಪಿ ಬಾಬು ಅಧ್ಯಕ್ಷತೆ ವಹಿಸಿದ್ದರು.ಶಾಸಕ ಇ.ಚಂದ್ರಶೇಖರನ್, ಸಿ.ಪಿ ಮುರಳಿ ಮುಂತಾದವರು ಉಪಸ್ಥಿತರಿದ್ದರು.
ಸಂದಿಗ್ಧತೆ ನಿಭಾಯಿಸಲು ಕಾರ್ಯಕರ್ತರು ಮುಂದಾಗಬೇಕು-ಕಾನಂ ರಾಜೇಂದ್ರನ್
0
ಏಪ್ರಿಲ್ 22, 2023