ಕಾಸರಗೋಡು: ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ ಸುಬ್ರಮಣ್ಯ ದೇವಸ್ಥಾನ ದಲ್ಲಿ ಮೇ 19ರಂದು ನಡೆಯಲಿರುವ ಸಾಮೂಹಿಕ ಮಹಾ ಚಂಡಿಕಾಯಾಗದ ಹಿನ್ನೆಲೆಯಲ್ಲಿ ವಿವಿಧ ಸಮಿತಿಗಳ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ ಅಣಂಗೂರಿನ ಅರುಣಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು.
ಚಂಡಿಕಾಯಾಗ ಸಮಿತಿ ಕೋಶಾಧಿಕಾರಿ ಕೆ ಕಮಲಾಕ್ಷ ಅಣÀಂಗೂರ್ ಅದ್ಯಕ್ಷತೆ ವಹಿಸಿದ್ದರು. ಮಹಿಳಾ ಸಮಿತಿ ಅಧ್ಯಕ್ಷೆ ಆಶಾ ರಾಧಾಕೃಷ್ಣ ಆಮಂತ್ರಣ ಪತ್ರಿಕೆ ವಿತರಿಸಿ ಯಾಗಕ್ಕೆ ಸಂಪೂರ್ಣ ಸಹಕಾರ ನೀಡಲು ಕರೆ ನೀಡಿದರು. ಯಾಗ ಸಮಿತಿ ಉಪಾಧ್ಯಕ್ಷ ಲೋಕೇಶ್ ಕುಮಾರ್ ಅಣಂಗೂರ್ ಉಪಸ್ಥಿತರಿದ್ದರು ಸಂಚಾಲಕಿ ಉಷಾ ಕಿರಣ್, ಸುಕನ್ಯಾ ರಶ್ಮಿ ಉಪಸ್ಥಿತರಿದ್ದರು. ಬಬಿತಾ ಸಂತೋಷ್ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು.
ಚಂಡಿಕಾಯಾಗ: ಸಮಿತಿಗಳ ಸಭೆ, ಆಮಂತ್ರಣ ವಿತರಣೆ
0
ಏಪ್ರಿಲ್ 09, 2023