HEALTH TIPS

ಹೂಸ್ಟನ್ ವಿಶ್ವವಿದ್ಯಾಲಯದಲ್ಲಿ ತಮಿಳು ಭಾಷೆಯ ಸಾಹಿತ್ಯ-ಸಂಸ್ಕೃತಿ ಕುರಿತು ಸಂಶೋಧನೆ

 

               ಅಮೆರಿಕ: ತಮಿಳು ಭಾಷೆಯ ಸಂಸ್ಕೃತಿ, ಸಾಹಿತ್ಯ ಕುರಿತಂತೆ ಸಂಶೋಧನೆ ನಡೆಸಲು ಭಾರತೀಯ ಸಾಂಸ್ಕೃತಿಕ ಅಧ್ಯಯನ ಪೀಠವನ್ನು ಸ್ಥಾಪಿಸುವ ಸಲುವಾಗಿ ಜ್ಞಾಪಕ ಪತ್ರಕ್ಕೆ ಇಲ್ಲಿನ ಹೂಸ್ಟನ್ ವಿಶ್ವವಿದ್ಯಾಲಯ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯು(ಐಸಿಸಿಆರ್) ಸಹಿ ಹಾಕಿವೆ.

                  'ಈ ಕುರಿತಂತೆ ನಾವು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಸಮಿತಿಗೆ ಕೃತಜ್ಞರಾಗಿದ್ದೇವೆ. ಖಂಡಿತಾ ಇದು ಭಾರತ ಹಾಗೂ ಅಮೆರಿಕದ ಸಾಂಸ್ಕೃತಿಕ ಸಂಬಂಧಗಳನ್ನು ಗಟ್ಟಿಗೊಳಿಸಲಿದೆ' ಎಂದು ಹೂಸ್ಟನ್ ವಿಶ್ವವಿದ್ಯಾಲಯದ ಅಧ್ಯಕ್ಷೆ ರೇಣು ಖಟೋರ್ ಹೇಳಿದರು. ರೇಣು ಅವರು 2008ರಿಂದ ಅಮೆರಿಕದ ಸಮಗ್ರ ಸಂಶೋಧನಾ ವಿಶ್ವವಿದ್ಯಾಲಯಗಳಿಗೆ ಮುಂದಾಳತ್ವ ವಹಿಸಿಕೊಂಡ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ.

                     ಬೇರೆ ಬೇರೆ ದೇಶಗಳ ಸಂಸ್ಕೃತಿ ಕುರಿತು ನಡೆಸುವ ಸಂಶೋಧನೆಗಳಿಂದ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ವರ್ಚಸ್ಸು ಹೆಚ್ಚುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಅನುಭವ ಹೆಚ್ಚಾಗಿ ಜಾಗತಿಕ ಮಟ್ಟದಲ್ಲಿ ಕೀರ್ತಿ ಸಂಪಾದಿಸುತ್ತಾರೆ ಎಂಬುದು ರೇಣು ಅಭಿ‌ಪ್ರಾಯ.

                     ಐಸಿಸಿಆರ್ ಮಂಡಳಿಯು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಅತಿಥಿ ಉಪನ್ಯಾಸಕರಾಗಿ ಭಾರತದಿಂದ ತಮಿಳು ಸಂಸ್ಕೃತಿಯಲ್ಲಿ ಅಧ್ಯಯನ ಮಾಡಿದವರಿಗೆ ಹುದ್ದೆ ಸ್ಥಾಪಿಸಲಿದೆ.

                     ತಮಿಳು ಭಾಷೆ ವಿಶ್ವದಲ್ಲೇ ಅತ್ಯಂತ ಹಳೆಯ ಭಾಷೆ ಎಂದು ಪರಿಗಣಿಸಲಾಗಿದ್ದು, ಅಮೆರಿಕದಲ್ಲಿ ಸುಮಾರು 3,00,000 ತಮಿಳಿಗರಿದ್ದು, ಇಲ್ಲಿ ಮಾತನಾಡುವ ಐದು ಅಗ್ರ ಭಾಷೆಗಳಲ್ಲಿ ಒಂದಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries