ಏಷ್ಯಾದಲ್ಲಿ ಹೆಚ್ಚಿದ ತಾಪಮಾನ, ಭಾರತದಲ್ಲೂ ಬಿಸಿ ಗಾಳಿಯ ಎಚ್ಚರಿಕೆ
0samarasasudhiಏಪ್ರಿಲ್ 19, 2023
ನವದೆಹಲಿ: ಭಾರತದಿಂದ ದಕ್ಷಿಣ ಚೀನಾ, ಥೈಲ್ಯಾಂಡ್‌ವರೆಗೆ, ಈ
ವರ್ಷ ಏಷ್ಯಾದ ಹಲವು ದೇಶಗಳಲ್ಲಿ ತಾಪಮಾನ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ ಎಂದು
ಆಕ್ಸಿಯೋಸ್ ವರದಿ ಮಾಡಿದೆ.
ಸೋಮವಾರ, ಭಾರತದ ಪ್ರಯಾಗರಾಜ್ ನಲ್ಲಿ ತಾಪಮಾನ 44.6 ಡಿಗ್ರಿ ಸೆಲ್ಸಿಯಸ್ ಗೆ
ತಲುಪಿದೆ. ಬಾಂಗ್ಲಾದೇಶದಲ್ಲಿ 40 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ
ದಾಖಲಾಗಿದೆ. ಮುಂದಿನ ದಿನಗಳಲ್ಲಿ ಶಾಖದ ತೀವ್ರತೆ ಇನ್ನೂ ಕೆಟ್ಟದಾಗಿರುತ್ತದೆ" ಎಂದು
ಹವಾಮಾನಶಾಸ್ತ್ರಜ್ಞ ಮತ್ತು ಹವಾಮಾನ ಇತಿಹಾಸಕಾರ ಮ್ಯಾಕ್ಸಿಮಿಲಿಯಾನೊ ಹೆರೆರಾ ಅವರು
ಎಚ್ಚರಿಸಿದ್ದಾರೆ.