ಈ ಮಾರ್ಡನ್ ಯುಗದಲ್ಲಿ ಸಿಕ್ಕಾಪಟ್ಟೆ ಜಂಕ್ ಫುಡ್‌ಗಳನ್ನು ತಿನ್ನೋದು ಹಾಗೂ ಏಕಾ ಏಕಿ ತೂಕ ಹೆಚ್ಚು ಮಾಡಿಕೊಳ್ಳೋದು. ಇನ್ನೂ ಕೆಲವರಿಗೆ ಹಾರ್ಮೋನ್ ಸಮಸ್ಯೆಯಿಂದ ಕೂಡ ತೂಕ ಹೆಚ್ಚಾಗುವ ಸಾಧ್ಯತೆಗಳು ಇರುತ್ತದೆ. ಆದ್ರೆ ಈ ಹೆಚ್ಚಾದ ತೂಕವನ್ನು ಕರಗಿಸೋದಕ್ಕೆ ಹರ ಸಾಹಸವನ್ನೇ ಪಡೆಬೇಕಾಗುತ್ತೆ.
ಒಂದು ಪಕ್ಷ ದೇಹದ ತೂಕ ಇಳಿದ್ರು ಕೂಡ ಕೆಲವೊಂದು ಸಾರಿ ನಮ್ಮ ಮುಖದ ಬೊಜ್ಜು
ಕರಗೋದೇ ಇಲ್ಲ. ಮುಖದ ಬೊಜ್ಜು ಕರಗಿಸೋದಕ್ಕೆ ಅಂತ ಯೋಗ, ವ್ಯಾಯಾಮ ಹೀಗೆ ಸಿಕ್ಕಾಪಟ್ಟೆ
ಸರ್ಕಸ್ ಮಾಡ್ತೀವಿ. ಆದ್ರೆ ನೀವು ಅಂದುಕೊಂಡ ಹಾಗೆ ಸುಲಭದಲ್ಲಿ ಮುಖದ ಫ್ಯಾಟ್
ಕರಗಬೇಕಂದ್ರೆ ನೀವು ನಿಮ್ಮ ಆಹಾರ ಶೈಲಿಯನ್ನು ಬದಲಿಸಬೇಕು.
ನಿತ್ಯ ಸೇವಿಸುವ ಆಹಾರದಲ್ಲಿ ಕೆಲವೊಂದು ಫುಡ್‌ಗಳನ್ನು ಅವೈಡ್ ಮಾಡಿದ್ರೆ ಖಂಡಿತ
ಮುಖದ ಬೊಜ್ಜು ಬೇಗನೆ ಕರಗುತ್ತದೆ. ಹಾಗಾದ್ರೆ ಆ ಆಹಾರಗಳು ಯಾವುದು ಅನ್ನೋದನ್ನ
ತಿಳಿಯೋಣ.
ದಿನನಿತ್ಯದ ಆಹಾರದಲ್ಲಿ ಬದಲಾವಣೆ ಇರಲಿ
ನೀವು
ದಿನನಿತ್ಯ
ಸೇವಿಸುವ
ಆಹಾರದಲ್ಲಿ
ಬದಲಾವಣೆ
ಆದರೆ
ಖಂಡಿತ
ಮುಖದ
ಬೊಜ್ಜನ್ನು
ಕರಗಿಸಬಹುದು.
ಅನೇಕ
ಆಹಾರಗಳು
ನಿಮ್ಮ
ದೇಹದಲ್ಲಿ
ಬೊಜ್ಜು
ಹೆಚ್ಚಾಗೋದಕ್ಕೆ
ಕಾರಣವಾಗಬಹುದು.
ಇಂತಹ
ಆಹಾರಗಳನ್ನು
ನೀವು
ಅವೈಡ್
ಮಾಡಲೇಬೇಕಾಗುತ್ತದೆ.
ಅತಿಯಾದ
ಸೋಡಿಯಂ
ಹಾಗೂ
ಉಪ್ಪು
ಸೇವಿಸುವುದರಿಂದ
ಮುಖದ
ಬೊಜ್ಜು
ಹೆಚ್ಚಾಗಬಹುದು.
ಹಾಗಾದ್ರೆ
ಯಾವ
ಆಹಾರಗಳನ್ನು
ನೀವು
ತ್ಯಜಿಸಲೇಬೇಕು
ಅನ್ನೋದನ್ನ
ನೋಡೋಣ
:
1. ಮಧ್ಯಪಾನ
ನೀವು ಮಧ್ಯಪಾನವನ್ನು ತ್ಯಜಿಸಲೇಬೇಕು. ಯಾಕಂದ್ರೆ ಇದು ನಿಮ್ಮ ಮುಖದ ಬೊಜ್ಜು ಹೆಚ್ಚಾಗಲು ಮೂಲ ಕಾರಣ. ಆಲ್ಕೋಹಾಲ್‌ನಲ್ಲಿ ಅತೀ ಹೆಚ್ಚು ಪ್ರಮಾಣದ ಕ್ಯಾಲೋರಿ ಇರೋದ್ರಿಂದ ನಿಮ್ಮ ದೇಹದ ತೂಕ ಹೆಚ್ಚಾಗುತ್ತದೆ. ಹಾಗೂ ಮುಖ ಕೂಡ ಊದಿಕೊಳ್ಳುತ್ತದೆ.
2. ಜಂಕ್ ಫುಡ್
ಬಾಯಿಗೆ ರುಚಿ ಸಿಗುತ್ತೆ ಅಂತ ಸಿಕ್ಕಾಪಟ್ಟೆ ಜಂಕ್ ಫುಡ್ ತಿನ್ನುತ್ತೇವೆ. ಇತ್ತೀಚಿಗೆ
ಜಂಕ್ ಫುಡ್ ಇಲ್ಲದೇ ಜೀವನವೇ ಇಲ್ಲ ಎಂಬಂತಾಗಿದೆ. ಆದ್ರೆ ಇದು ದೇಹದ ಆರೋಗ್ಯಕ್ಕೆ
ತುಂಬಾನೇ ಅಪಾಯ. ಜಂಕ್ ಫುಡ್‌ಗಳಲ್ಲಿ ಸೋಡಿಯಂ ಅಂಶ ಅಧಿಕವಾಗಿ ಇರೋದ್ರಿಂದ ಇದು ದೇಹದ
ತೂಕ ಹೆಚ್ಚುತ್ತದೆ ಹಾಗೂ ಮುಖ ಕೂಡ ಊದಿಕೊಳ್ಳುತ್ತದೆ. ಹೀಗಾಗಿ ಜಂಕ್ ಫುಡ್‌ಗಳಿಗೆ
ಬಾಯ್ ಬಾಯ್ ಹೇಳಲೇಬೇಕು.
3. ಮಾಂಸ
ತೂಕ ಹಾಗೂ ಮುಖದ ಬೊಜ್ಜು ಹೆಚ್ಚಾಗಲು ಕೆಂಪು ಮಾಂಸಗಳ ಸೇವನೆ ಕೂಡ ಒಂದು ಕಾರಣವಾಗಿದೆ.
ಅವುಗಳೆಂದರೆ ದನ, ಹಂದಿ, ಕುರಿ, ಆಡು ಮುಂತಾದವುಗಳು. ಇವುಗಳಲ್ಲಿ ಅತಿಯಾದ ಕ್ಯಾಲರಿ ಅಂಶ
ಇರೋದ್ರಿಂದ ಇವು ಮನುಷ್ಯನ ದೇಹದ ತೂಕ ಹೆಚ್ಚಿಸುತ್ತದೆ. ಇವುಗಳನ್ನು ತಿನ್ನದೇ ಇದ್ದರೆ
ಉತ್ತಮ. ಇಲ್ಲದಿದ್ದರೆ ಆದಷ್ಟು ಕಡಿಮೆ ಮಾಡಿ.
4. ಅತಿಯಾದ ಉಪ್ಪಿನ ಸೇವನೆ
ಅತಿಯಾದ್ರೆ ಅಮೃತವು ವಿಷ ಅಂತಾರೆ ಹಾಗೇ ಆಹಾರದಲ್ಲಿ ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು
ಸೇವಿಸುವುದು ಉತ್ತಮ. ಕೆಲವರಂತೂ ಅಡುಗೆಗೆ ಅತಿಯಾಗಿ ಉಪ್ಪು ಬಳಸುತ್ತಾರೆ. ಇನ್ನೂ
ಕೆಲವರು ಊಟದ ಮಧ್ಯೆ ಎದ್ದು ಹೋಗಿ ಉಪ್ಪು ತೆಗೆದುಕೊಂಡು ಬಂದು ಊಟಕ್ಕೆ ಸೇರಿಸುತ್ತಾರೆ.
ಸೋಡಿಯಂ ದೇಹದ ತೂಕ ಹಾಗೂ ಮುಖದ ಬೊಜ್ಜು ಹೆಚ್ಚಾಗಲು ಕಾರಣವಾಗುತ್ತದೆ.
5. ಬ್ರೆಡ್
ಅನೇಕ ಜನರು ಬೆಳಗ್ಗಿನ ಉಪಹಾರಕ್ಕೆ ಬ್ರೆಡ್ ಸೇವಿಸುತ್ತಾರೆ. ಬ್ರೆಡ್ ಟೋಸ್ಟ್,
ಸ್ಯಾಂಡ್‌ವೆಜ್, ಬ್ರೆಡ್ ಅಂಮ್ಲೇಟ್ ಹೀಗೆ ಬ್ರೆಡ್ ಅನ್ನು ವಿವಿಧ ರೀತಿಯಲ್ಲಿ
ಸೇವಿಸುತ್ತಾರೆ. ತೂಕ ಹೆಚ್ಚಾಗೋದು ಹಾಗೂ ಮುಖದ ಫ್ಯಾಟ್ ಹೆಚ್ಚಾಗಲು ಬ್ರೆಡ್
ಕಾರಣವಾಗುತ್ತದೆ. ಬ್ರೆಡ್‌ನಲ್ಲಿ ಕಾರ್ಬೋಹೈಡ್ರೆಟ್ಸ್ ಅಧಿಕವಾಗಿದ್ದು ಇದು ಮುಖದ
ಬೊಜ್ಜನ್ನು ಹೆಚ್ಚಿಸುತ್ತದೆ.
6. ಸಂಸ್ಕರಿಸಿದ ಉತ್ಪನ್ನಗಳು
ಸಂಸ್ಕರಿಸಿದ ಉತ್ಪನ್ನಗಳನ್ನು ಸೇವಿಸೋದು ನಿಮ್ಮ ಆರೋಗ್ಯಕ್ಕೆ ಹಾನಿಕಾರ. ಅದು
ಸಂಸ್ಕರಿಸಿದ ಸಕ್ಕರೆ ಇರಬಹುದು ಅಥವಾ ಸಂಸ್ಕರಿಸಿದ ಎಣ್ಣೆ ಮುಂತಾದವುಗಳು. ಇವುಗಳನ್ನು
ಸೇವಿಸುವುದರಿಂದ ಮುಖದ ಬೊಜ್ಜು ಖಂಡಿತ ಹೆಚ್ಚಾಗುತ್ತದೆ.
ಈ ಮೇಲಿನ ವಸ್ತುಗಳನ್ನು ನಿಮ್ಮ ಆಹಾರದಿಂದ ಆದಷ್ಟು ದೂರವಿಡೀ.