ಬದಿಯಡ್ಕ: ನೀರ್ಚಾಲು ಬೇಳ ಶ್ರೀ ಕುಮಾರಚಾಮುಂಡಿ ಜಜಿಙವದ ಬಯಲಕೋಲ ಮತ್ತು ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಕೆಂಡಸೇವೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು. ಏ.4ರಂದು ರಾತ್ರಿ ಭಜನೆ, ಏಣಿಯರ್ಪು ಕೋದಂರ್ಬತ್ತ್ ತರವಾಡು ಮನೆಯಿಂದ ಭಂಡಾರ ಆಗಮನ, ಶ್ರೀ ಕುಮಾರಚಾಮುಂಡಿ, ಬಬ್ಬರ್ಯ ಇತ್ಯಾದಿ ದೈವಗಳಿಗೆ ಕೋಲ, ಶ್ರೀ ವಿಷ್ಣುಮೂರ್ತಿ ದೈವದ ನೃತ್ಯ, ಅರಸಿನಹುಡಿ ಪ್ರಸಾದ ವಿತರಣೆ ನಡೆಯಿತು. ಏ.5ರಂದು ಸಂಜೆ ಏಣಿಯರ್ಪು ಕೋದಂರ್ಬತ್ ತರವಾಡು ದೈವಸ್ಥಾನದಿಂದ ಭಂಡಾರÀ ಆಗಮನ, ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರ ಆಗಮನ, ಸ್ವಾಗತ, ಮೇಲೇರಿಗೆ ಅಗ್ನಿಸ್ಪರ್ಶ ನಡೆಯಿತು. ನಂತರ ಸಿಂಧೂರ ಯುವಕ ವೃಂದದ ಪ್ರಾಯೋಜಕತ್ವದಲ್ಲಿ ಸ್ಥಳೀಯ ಸಾಧಕರಿಗೆ ಸನ್ಮಾನ, ಟಿವಿ ರಿಯಾಲಿಟಿ ಶೋ ಖ್ಯಾತಿಯ ಸುಧೀರ್ ಉಳ್ಳಾಲ್ ನೇತೃತ್ವದ ಸಿಟಿ ಗೈಸ್ ಕುಡ್ಲಕ್ವೀನ್ಸ್ ತಂಡದಿಂದ ನೃತ್ಯ ವೈಭÀವ ಕಾರ್ಯಕ್ರಮ, ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟ, ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಸೇವೆ (ಕೆಂಡಸೇವೆ), ಅರಸಿನಹುಡಿ ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
ಬೇಳದಲ್ಲಿ ಬಯಲಕೋಲ ಮತ್ತು ಒತ್ತೆಕೋಲ ಸಂಪನ್ನ
0
ಏಪ್ರಿಲ್ 09, 2023
Tags