ಕಾಸರಗೋಡು: ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಸೋಮವಾರ ಸಂಭ್ರಮದ ಬೆಡಿ ಉತ್ಸವ ನಡೆಯಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಬೆಳಗ್ಗೆ ಉತ್ಸವ ಬಲಿ, ವಿವಿಧ ವೈದಿಕ ಕಾರ್ಯಖ್ರಮಗಳು ಜರುಗಿತು. ಸಂಜೆ ಮೂಲಸ್ಥಾನ ಉಳಿಯತ್ತಡ್ಕಕ್ಕೆ ಶ್ರೀದೇವರ ಘೋಷಯಾತ್ರೆ, ಮೂಲಸ್ಥಾನ ಉಳಿಯತ್ತಡ್ಕದಲ್ಲಿ ಕಟ್ಟೆಪೂಜೆ, ರಾತ್ರಿ ಮಧೂರು ಬೆಡಿಕಟ್ಟೆಯಲ್ಲಿ ಕಟ್ಟೆಪೂಜೆ, ಸಾಂಪ್ರದಾಯಕ ಸುಡುಮದ್ದು ಪ್ರದರ್ಶನ ನಡೆಯಿತು. ಕಿವಿಗಡಚಿಕ್ಕುವ ಸುಡುಮದ್ದು ಪ್ರದರ್ಶನಕ್ಕೆ ಭಕ್ತಾದಿಗಳು ಶಿಳ್ಳೆ, ಕರತಾಡನದೊಂದಿಗೆ ಕುಣಿದು ಕುಪ್ಪಳಿಸಿದರು. ನಂತರ ಶ್ರೀದೇವರ ಶಯನ, ಬೆಳಗ್ಗೆ ಕವಾಟೋದ್ಘಾನೆ ನಡೆಯಿತು.