ಕಾಸರಗೋಡು: ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ವದ ಕೆಲಸ ನಿರ್ವಹಿಸುತ್ತಿರುವ ಮೇಲ್ಪರಂಬದ ಆಶ್ವಾಸಂ ವೈದ್ಯರ್ ಅವರು ಎಡನೀರು ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಔಷಧೀಯ ಸಸ್ಯತೋಟ ನಿರ್ಮಾಣ ಮತ್ತು ಪರಿಸರ ಸಂಬಂಧಿ ತರಗತಿ ನಡೆಸಿಕೊಟ್ಟರು.
ಔಷಧೀಯ ಸಸ್ಯತೋಟ ನಿರ್ಮಾಣಕ್ಕೆ ಶಾಲಾ ಪ್ರಾಂಶುಪಾಲ ಶ್ರೀನಿವಾಸನ್ ಚಾಲನೆ ನೀಡಿದರು. ಶಿಕ್ಷಕರಾದ ಶ್ರೀಲತಾ, ಸುಧಾ, ಕೃಷ್ಣನ್, ವಇದ್ಯರ್ಥಿಗಳಾದ ಧನ್ಯಶ್ರೀ, ಮನ್ವಿತ್, ವೈಷ್ಣವೀ, ಸುಜಿತ್, ಹಮೀದ್ ಉಪಸ್ಥಿತರಿದ್ದರು. ಲಾವಂಚ, ಭದ್ರಾಕ್ಷ ಸೇರಿದಂತೆ ನಾನಾ ಪ್ರಬೇದದ ಔಷಧೀಯ ಸಸ್ಯಗಳನ್ನು ತೋಟದಲ್ಲಿ ನೆಡಲಾಯಿತು.
ಔಷಧೀಯ ಸಸ್ಯಗಳ ಬಗ್ಗೆ ಸಮಗ್ರ ಮಾಹಿತಿ, ಇವುಗಳ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದರು. ಔಷಧೀಯ ಸಸ್ಯಗಳು ನಮ್ಮ ಮನೆ ವಠಾರದಲ್ಲಿದ್ದರೂ, ಇವುಗಳ ಬಗ್ಗೆ ನಮಗಿಂದು ಮಾಹಿತಿ ಇಲ್ಲದಾಗಿದೆ. ಹಿತ್ತಿಲಲ್ಲಿ ಲಭಿಸುವ ಹಲವಾರು ಸಸ್ಯಗಳು ಔಷಧೀಯ ಗುಣ ಹೊಂದಿದ್ದು, ಇವುಗಳನ್ನು ಪತ್ತೆಹಚ್ಚಿ ಬಳಸಲು ಹಾಗೂ ಇವುಗಳ ಬಳಕೆಯಿಂದ ಕೆಲವೊಂದು ಕಾಯಿಲೆಗಳಿಂದ ತಕ್ಷಣ ಚಿಕಿತ್ಸೆ ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡು ಇವುಗಳನ್ನು ಔಷಧಿಯಾಗಿ ಬಳಕೆಮಾಡುವುದನ್ನು ನಾವು ಕರಗತಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.
ಎಡನೀರು ಶಾಲಾ ವಠಾರದಲ್ಲಿ ಔಷಧೀಯ ಸಸ್ಯ ತೋಟ ನಿರ್ಮಾಣ, ಔಷದಿಯ ಸಸ್ಯಗಳ ಬಗ್ಗೆ ಮಾಹಿತಿ
0
ಏಪ್ರಿಲ್ 19, 2023